ಶೆಡ್ ನಲ್ಲಿ ಅಗ್ನಿ ಅವಘಡ : ಸುಟ್ಟು ಕರಕಲಾದ 35 ಕುರಿಗಳು

Prasthutha|

ಚಾಮರಾಜನಗರ:  ಕುರಿಗಳನ್ನು ಕೂಡಿ ಹಾಕಿದ್ದ ಶೆಡ್ ವೊಂದಕ್ಕೆ  ಬೆಂಕಿ ಬಿದ್ದಿದ್ದು, ಶೆಡ್ ನೊಳಗಿದ್ದ 35 ಕುರಿಗಳು ಸಜೀವ ದಹನಗೊಂಡಿರುವ ಘಟನೆ ತಾಲೂಕಿನ ಕೋಡಿಉಗನೆ ಗ್ರಾಮದಲ್ಲಿ ನಡೆದಿದೆ.

- Advertisement -

ಗ್ರಾಮದ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಶೆಡ್ ಗೆ  ಮಧ್ಯರಾತ್ರಿ ಸುಮಾರು 1.30 ರ ವೇಳೆಗೆ ಬೆಂಕಿ ಹೊತ್ತಿಕೊಂಡಿದ್ದು, 35 ಕುರಿಗಳು ಸೇರಿದಂತೆ ಒಂದು ಎತ್ತಿನಗಾಡಿ, ಎರಡು ನೇಗಿಲು 400ಕ್ಕೂ ಹೆಚ್ಚು ತೆಂಗಿನಕಾಯಿಗಳು ಬೆಂಕಿಗೆ ಆಹುತಿಯಾಗಿವೆ.

ಕಿಡಿಗೇಡಿಗಳು ಈ  ಕೃತ್ಯವನ್ನು ಮಾಡಿರಬಹುದು ಎಂದು ಶಂಕಿಸಲಾಗಿದ್ದು , ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಕುರಿಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮಹಾದೇವಸ್ವಾಮಿ ಅವರ ಜೀವನ ದುಸ್ತರವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

- Advertisement -

Join Whatsapp