ಬೆಂಗಳೂರಿನ ಮತ್ತೊಂದು ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಘಡ

Prasthutha|

ಬೆಂಗಳೂರು:  ಅಪಾರ್ಟ್ಮೆಂಟ್ ಒಂದರಲ್ಲಿ  ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ವಸುಂಧರಾ ಲೇಔಟ್ನಲ್ಲಿ ಬುಧವಾರ ಸಂಜೆ ಕಾಣಿಸಿಕೊಂಡಿದೆ.

- Advertisement -

ಸಮುಚ್ಚಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಫ್ಲ್ಯಾಟ್ ಗಳಲ್ಲಿದ್ದವರೆಲ್ಲಾ ಓಡೋಡಿ ಹೊರಗೆ ಬಂದಿದ್ದಾರೆ. ವಿ ಮ್ಯಾಕ್ಸ್ ಚಾಲೇಟ್ ವಸತಿ ಸಮುಚ್ಚಯದಲ್ಲಿ ಆವರಿಸಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.

ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನವಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬೆಂಕಿಯಿಂದಾಗಿ ಸುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ.

- Advertisement -

ಇತ್ತೀಚೆಗೆ ಬೆಂಗಳೂರಿನ  ಬೊಮ್ಮನಹಳ್ಳಿ ಕ್ಷೇತ್ರದ ದೇವರ ಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಬೆಂಕಿ ಅವಘಡದಲ್ಲಿ, ಫ್ಲ್ಯಾಟ್ನ ಬಾಲ್ಕನಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ನಿಂದ ಹೊರ ಬರಲಾರದೇ ತಾಯಿ – ಮಗಳು ಸಜೀವವಾಗಿ ದಹನವಾಗಿದ್ದರು.



Join Whatsapp