ಪೈಂಟ್ ಮಾರಾಟ ಮಳಿಗೆಗೆ ಬೆಂಕಿ; ಆತಂಕದಲ್ಲಿ ಅಕ್ಕಪಕ್ಕದ ಅಂಗಡಿಗಳು

Prasthutha|

ಮಡಿಕೇರಿ: ಗೋಣಿಕೊಪ್ಪಲಿನ ಮುಖ್ಯ ರಸ್ತೆಯಲ್ಲಿರುವ ಪೇಂಟ್ಸ್ ಮಾರಾಟ ಮಳಿಗೆಗೆ ಮಂಗಳವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.


ಸ್ಥಳಕ್ಕೆ ಅಗ್ನಿಶಾಮಕಪಡೆ ಬಂದು ಬೆಂಕಿ ನಂದಿಸಲು ಯತ್ನಿಸಿದರೂ ನೀರು ಖಾಲಿಯಾಗಿದೆ. ಬೆಂಕಿ ಧಗಧಗಿಸುತ್ತಿದ್ದು, ಸದ್ಯ ಗ್ರಾಮ ಪಂಚಾಯಿತಿ ನೀರಿನ ವ್ಯವಸ್ಥೆ ಮಾಡುತ್ತಿದೆ.
ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹರಡುವ ಭೀತಿ ಮೂಡಿದೆ.

- Advertisement -