ಮುಂಬೈನಲ್ಲಿ ಭಾರೀ ಅಗ್ನಿ ಅವಘಡ: 6 ಮಂದಿ ಸಾವು

Prasthutha|

- Advertisement -

ಮುಂಬೈ: ಬಹುಮಹಡಿ ಕಟ್ಟಡ ಒಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಆರು ಜನ ಮೃತಪಟ್ಟಿರುವ ಘಟನೆ ಗೋರೆಗಾಂವ್‍ ನಲ್ಲಿ ನಡೆದಿದೆ.

ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ.

- Advertisement -

ಬೆಂಕಿಗೆ ಆಹುತಿಯಾದ ಆರು ಜನರಲ್ಲಿ ಓರ್ವ ಪುರುಷ, ಐವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡ 40 ಜನರಲ್ಲಿ 12 ಪುರುಷರು ಮತ್ತು 28 ಮಹಿಳೆಯರು, ಓರ್ವ ಅಪ್ರಾಪ್ತ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮುಂಬೈನ ಎಚ್‍ ಬಿಟಿ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.