ಸುಧೀರ್ ಸೂರಿ ಹತ್ಯೆಯನ್ನು ಸಂಭ್ರಮಿಸಿದ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲು

Prasthutha|

ಅಮೃತ್ ಸರ: ಕೆಲವು ದಿನಗಳ ಹಿಂದೆ ಅಮೃತಸರದಲ್ಲಿ ಹತ್ಯೆಗೀಡಾದ ಶಿವಸೇನಾ ನಾಯಕ ಸುಧೀರ್ ಸೂರಿ ಅವರ ಸಾವಿಗೆ ಸಂಬಂಧಿಸಿದಂತೆ ಸಿಹಿ ಹಂಚಿದ ಆರೋಪದ ಮೇಲೆ ಪಂಜಾಬ್ ನ ಲೂಧಿಯಾನಾದಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.

- Advertisement -

ಸುಧೀರ್ ಸೂರಿ ಅವರ ಸಾವಿನ ಬಗ್ಗೆ ಸಿಹಿ ಹಂಚುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಲೂಧಿಯಾನಾ ಪೊಲೀಸರು ಭಾನುವಾರ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಸೇಲಂ ತಬ್ರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಲೂಧಿಯಾನಾ ಪೊಲೀಸ್ ಆಯುಕ್ತ ಕೌಸ್ತುಭ್ ಶರ್ಮಾ ತಿಳಿಸಿದ್ದಾರೆ.

- Advertisement -

ನವೆಂಬರ್ 4 ರಂದು ಅಮೃತಸರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಮೃತಪಟ್ಟಿದ್ದರು.

Join Whatsapp