ಜಾತಿ ನಿಂದನೆ ಆರೋಪ: ಹಾಸ್ಯನಟ ಹುಲಿ ಕಾರ್ತಿಕ್​ ವಿರುದ್ಧ FIR ದಾಖಲು

Prasthutha|

ಬೆಂಗಳೂರು: ಖಾಸಗಿ ಸುದ್ದಿ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ಮೂರನೇ ಆವೃತ್ತಿಯ ವಿನ್ನರ್​ ನಟ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ FIR ದಾಖಲಾಗಿದೆ.

- Advertisement -

ಹುಲಿ ಕಾರ್ತಿಕ್​ ಅವರು ಕೆಲ ದಿನಗಳ ಹಿಂದಷ್ಟೇ ಪ್ರಸಾರವಾದ ಖಾಸಗಿ ಸುದ್ದಿ ವಾಹಿನಿಯ ಅವಾರ್ಡ್ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಭೋವಿ ಜನಾಂಗಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ್ದು, ಘಟನೆ ಸಂಬಂಧ ಲೋಕೇಶ್ ಎಂಬುವವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಅವಾರ್ಡ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾರ್ತಿಕ್​, ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ. ಈ ಬೆಲ್ಟ್​ ನನ್ನ ಕೈಯಲ್ಲಿ ಇದೆ ಎಂದರೆ ಅದಕ್ಕೆ ಸ್ಕ್ರಿಪ್ಟ್ ಕಾರಣ. ಸ್ಕ್ರಿಪ್ಟ್ ರೈಟರ್ ಸಂದೀಪ್ ಅವರಿಗೆ ಧನ್ಯವಾದ ಎಂದು ಹೇಳಿದ್ದರು. ಈ ಹೇಳಿಕೆಯೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದು, ಸ್ಕ್ರಿಪ್ಟ್​ ರೈಟರ್, ಕಾರ್ಯಕ್ರಮದ ನಿರ್ದೇಶಕ ಹಾಗೂ ನಿರ್ಮಾಪಕರ​ ವಿರುದ್ದವೂ ಜಾತಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾರೆ.

- Advertisement -

ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್  ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ ದೂರು ದಾಖಲಾಗಿದೆ. ಅನ್ನಪುರ್ಣೇಶ್ವರಿ ನಗರ ಪೊಲೀಸ್​ ಠಾಣೆಯವರು ಈ ಸಂಬಂಧ FIR ದಾಖಲಿಸಿದ್ದಾರೆ. ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್​ಗೆ ನೋಟಿಸ್ ನೀಡಲಾಗಿದೆ.



Join Whatsapp