‘ಫ್ಯಾಟ್ ಮುಕ್ತ’ ಕಾಸ್ಮೆಟಿಕ್ ಸರ್ಜರಿಗೆ ನಟಿ ಬಲಿ: ನಿರ್ಲಕ್ಷ್ಯ ವಹಿಸಿದ ಕ್ಲಿನಿಕ್ ವಿರುದ್ಧ FIR ದಾಖಲು

Prasthutha|

ಬೆಂಗಳೂರು: ಫ್ಯಾಟ್ (ಬೊಜ್ಜು) ಕರಗಿಸಲು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಕನ್ನಡದ ಕಿರುತೆರೆ ನಟಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕ್ಲಿನಿಕ್ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಡಾ.ಶೆಟ್ಟಿ ಸೌಂದರ್ಯವರ್ಧಕ ಚಿಕಿತ್ಸಾಲಯದ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಮೃತ ನಟಿ ಚೇತನಾ ರಾಜ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೇತನಾ ಶುಕ್ರವಾರ ಕ್ಲಿನಿಕ್‌ಗೆ ಬಂದಿದ್ದು, ಸೊಂಟದ ಮೇಲಿನ ಫ್ಯಾಟ್ ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಒತ್ತಾಯಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಆಕೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿಲ್ಲ ಎಂದು ಚೇತನಾ ತಂದೆ ವರದರಾಜು ದೂರಿನಲ್ಲಿ ಆರೋಪಿಸಿದ್ದಾರೆ.

ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೂ ಮುನ್ನ ನಮಗೆ ಮಾಹಿತಿ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಮಗಳು ಸಾವನ್ನಪ್ಪಿದ್ದು, ಕ್ಲಿನಿಕ್ ಮಾಲೀಕ ಡಾ.ಸಾಹೇಬಗೌಡ ಶೆಟ್ಟಿ ವಿರುದ್ಧ ಕ್ರಮಕ್ಕೆ ಚೇತನಾ ತಂದೆ ಆಗ್ರಹಿಸಿದ್ದಾರೆ.



Join Whatsapp