ಪ್ರಜ್ವಲ್ ರೇವಣ್ಣ ವಿರುದ್ಧದ ಎಫ್‌ಐಆರ್ ಅತ್ಯಂತ ದುರ್ಬಲ: ಕಾನೂನು ತಜ್ಞ

Prasthutha|

ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ, ಅತ್ಯಂತ ಆಕ್ರೋಶ ಹುಟ್ಡುಹಾಕಿದ ಸೆಕ್ಸ್ ಹಗರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಪೊಲೀಸರ ಮುಂದೆ ಬಂದರೂ ಬಂಧಿಸಲು ಅವಕಾಶವಿಲ್ಲ. ಅಶ್ಲೀಲ ವಿಡಿಯೋ ಕೇಸ್ ಕುರಿತಾಗಿ ದಾಖಲಾದ ಎಫ್‌ಐಆರ್ ನೋಡಿದರೆ, ಅದರಲ್ಲಿ ಯಾವುದೇ ಗಂಭೀರ ಆರೋಪಗಳಿಲ್ಲ ಎಂದು ಕಾನೂನು ತಜ್ಞ ವಕೀಲ ಸುಧನ್ವ ಹೇಳಿದ್ದಾರೆ.

- Advertisement -

ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತಾಗಿ ಮಾಧ್ಯಮದಲ್ಲಿ ಮಾತನಾಡಿದ ಅವರು, ನಾನು ಎಫ್‌ಐಆರ್ ನೋಡಿದ್ದೇನೆ. ಅದರಲ್ಲಿ 354ಎ ಮತ್ತು 354ಡಿ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. ಕೇಸ್‌ ರಿಜಿಸ್ಟರ್ ಮಾಡಿದ ಎಲ್ಲ ಸೆಕ್ಷನ್‌ಗಳೂ ಕೂಡ ಸುಲಭವಾಗಿ ಜಾಮೀನು ಪಡೆದುಕೊಳ್ಳಬಹುದು. ಈ ಕೇಸ್‌ನಲ್ಲಿ ಅತಿಹೆಚ್ಚು ಅಂದರೆ ಕೇವಲ 3 ವರ್ಷಗಳ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಷ್ಟೇ ಇದೆ ಎಂದಿದ್ದಾರೆ.

ಪೊಲೀಸರು ನೋಟಿಸ್ ಜಾರಿಗೊಳಿಸಿದ ನಂತರ ಆರೋಪಿ ಪ್ರಜ್ವಲ್ ರೇವಣ್ಣ ನೇರವಾಗಿ ವಿಚಾರಣೆಗೆ ಹಾಜರಾದರೂ ಅವರನ್ನು ಪೊಲೀಸರು ಬಂಧಿಸುವಂತಿಲ್ಲ. ಜೊತೆಗೆ, ಪ್ರಜ್ವಲ್ ವಿಚಾರಣಾ ಅಧಿಕಾರಿಗಳ ಮುಂದೆಯೇ ಜಾಮೀನು ಪಡೆದುಕೊಳ್ಳಬಹುದು. ಇಲ್ಲವೆಂದರೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ ಹಾಜರಾಗುವುದಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp