ಭೂ ಕಬಳಿಕೆ, ಜಾತಿನಿಂದನೆ ಆರೋಪ: ಸಚಿವ ಡಿ. ಸುಧಾಕರ್​ ಸೇರಿದಂತೆ ಮೂವರ ವಿರುದ್ದ FIR

Prasthutha|

ಬೆಂಗಳೂರು: ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದ ಅಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್​ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.

- Advertisement -

 ಸುಬ್ಬಮ್ಮ ಎಂಬುವರಿಂದ ದೂರು ನೀಡಲಾಗಿದೆ. ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಪಾಲುದಾರರಾಗಿರುವ ಸುಧಾಕರ್, ಮೋಸದಿಂದ ದಲಿತರ ಆಸ್ತಿ ಕಬಳಿಕೆ ಮಾಡಿದ್ದು, ಮನೆಯಲ್ಲಿದ್ದ ಮಗಳ‌ ಮೇಲೂ ಹಲ್ಲೆ ಮಾಡಿದ್ದಾರೆಂದು ಸುಬ್ಬಮ್ಮ ಆರೋಪಿಸಿದ್ದಾರೆ. ಹಾಗಾಗಿ ಸಚಿವ ಡಿ.ಸುಧಾಕರ್, ಶ್ರೀನಿವಾಸ್, ಭಾಗ್ಯಮ್ಮ ವಿರುದ್ಧ ಎಫ್​ಐಆರ್ ಹಾಕಲಾಗಿದೆ.​

ಯಲಹಂಕ ಗ್ರಾಮದ ಸರ್ವೆ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದು, ಕೋರ್ಟ್​ನಲ್ಲಿ ಕೇಸ್ ಇದ್ದಾಗ ಗುಂಪು ಕಟ್ಟಿಕೊಂಡು ದೌರ್ಜನ್ಯವೆಸಗಿದ್ದಾರೆ. ಮಹಿಳೆಯರನ್ನು ಕರೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿರುವುದಾಗಿ ಆರೋಪ ಮಾಡಿದ್ದಾರೆ.

Join Whatsapp