ಬೆಂಗಳೂರು: ಸೈಟ್ ಮತ್ತು ಫ್ಲಾಟ್ ಕೊಡುತ್ತೇನೆ ಎಂದು ಮೋಸ ಮಾಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 2008 ರಲ್ಲಿ 2ಕೋಟಿ 84 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ಇಂಡ್ ಸಿಂಗ್ ಡೆವಲಪರ್ಸ್ ಪ್ರೈ.ಲಿ ನ ನಿರ್ದೇಶಕ ಕೃಷ್ಣ ಎಂಬುವವರು ಈ ದೂರು ನೀಡಿದ್ದಾರೆ.
2004 ರಲ್ಲಿ ಕಟ್ಟಾ ಸುಬ್ರಮಣ್ಯ ಎಂಎಲ್‌ಎ ಅಗಿದ್ದಾಗ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಂತ ಹಂತವಾಗಿ ಒಟ್ಟು 2 ಕೋಟಿ 84 ಲಕ್ಷ ರೂಪಾಯಿಗಳನ್ನು ಇಂಡ್ ಸಿಂಡ್ ಕಂಪನಿಯಿಂದ ನಗದು ಮತ್ತು ಚೆಕ್ ಮೂಲಕ ಪಡೆದು ವಂಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.