ಮೈಸೂರು: ದಸರಾ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಟ್ರಾಫಿಕ್ ಜಾಮ್ ಆಗುತ್ತೆ ಮುಂದೆ ಹೋಗಿ. ಬೇಗ ಹೋಗಿ ಎಂದಿದ್ದಕ್ಕೆ ದಸರಾ ನೋಡಲು ಬಂದವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಮೂಲದ ಉಮೇಶ್, ಹರೀಶ್, ಧ್ರುವ, ಲತಾ, ಗಾನವಿ ವಿರುದ್ಧ ಎಫ್ಐಆರ್ ದಾಖಲಾಗಿದೆ.