ಬಿಎಸ್ಪಿ ಅಭ್ಯರ್ಥಿಗೆ ಹಣ, ಮನೆಯ ಆಮಿಷದ ಆರೋಪ | ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‌

Prasthutha|

ತಿರುವನಂತಪುರಂ : ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯ ವೇಳೆ, ನಾಮಪತ್ರ ಹಿಂಪಡೆಯಲು ಬಿಎಸ್‌ ಪಿ ಅಭ್ಯರ್ಥಿಗೆ ಹಣದ ಆಮಿಷವೊಡ್ಡಿದ ಆರೋಪದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

- Advertisement -

ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಬಿಎಸ್‌ ಪಿ ಅಭ್ಯರ್ಥಿ ಕೆ. ಸುಂರುದರ ಅವರು ಮಾಡಿರುವ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಮಂಜೇಶ್ವರ ಕ್ಷೇತ್ರದಿಂದ ಬಿಎಸ್ಪಿಯಿಂದ ಸುಂದರ ಮತ್ತು ಬಿಜೆಪಿಯಿಂದ ಸುರೇಂದ್ರನ್‌ ಸ್ಪರ್ಧಿಸಿದ್ದರು.

ತಾನೇ ಗೆಲ್ಲಬೇಕೆಂಬ ಕಾರಣಕ್ಕೆ ಸುರೇಂದ್ರನ್‌ ತನಗೆ ಹಣ, ಮನೆಯ ಆಮಿಷ ತೋರಿದ್ದರೆಂದು ಕೆ. ಸುಂದರ್‌ ಆರೋಪಿಸಿದ್ದಾರೆ. ನಾಮಪತ್ರ ಹಿಂಪಡೆದರೆ ೨.೫ ಲಕ್ಷ ರೂ. ಮತ್ತು ಒಂದು ಸ್ಮಾರ್ಟ್‌ ಫೋನ್‌ ಕೊಡುತ್ತೇನೆ ಎಂದಿದ್ದರು. ಹಾಗೇ ಕ್ಷೇತ್ರದಲ್ಲಿ ಗೆದ್ದರೆ, ೧೫ ಲಕ್ಷ ರೂ. ಜೊತೆಗೆ ಕರ್ನಾಟಕದಲ್ಲಿ ಒಂದು ಮನೆ, ವೈನ್‌ ಶಾಪ್‌ ಕೊಡಿಸುತ್ತೇನೆ ಎಂದೂ ಭರವಸೆ ನೀಡಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ಯಾರೂ ನನಗೆ ಕರೆ ಮಾಡಲಿಲ್ಲ ಎಂದು ಸುಂದರ್‌ ತಿಳಿಸಿದ್ದಾರೆ.

- Advertisement -

ಆದರೆ, ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಸಿಪಿಎಂ ಅಥವಾ ಐಯುಎಂಎಲ್‌ ಪಕ್ಷಗಳ ಒತ್ತಡಕ್ಕೊಳಗಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್‌ ಹೇಳಿದ್ದಾರೆ.  



Join Whatsapp