PSIಗೆ ಧಮ್ಕಿ ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Prasthutha|

ದಕ್ಷಿಣ ಕನ್ನಡ: ಪೊಲೀಸ್ ಠಾಣೆಯ ಎದುರು ಬೆಂಬಲಿಗರ ಪರ ಧರಣಿ ಮಾಡಿದಲ್ಲದೆ, PSI ಗೆ ಧಮ್ಕಿ ಹಾಕಿದ ಬೆಳ್ತಂಗಡಿ ತಾಲೂಕಿನ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. IPC ಸೆಕ್ಷನ್ 353, 504 ಅಡಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಹೊಂದಿ ಬಂಧಿತರಾದ ತಮ್ಮ ಬೆಂಬಲಿಗರ ಪರ ಶಾಸಕರು ಪೊಲೀಸ್ ಠಾಣೆ ಎದುರು ಧರಣಿ ಮಾಡಿದ್ದರು. ಈ ವೇಳೆ ಪೊಲೀಸ್ ಠಾಣೆ ನಿಮ್ಮಪ್ಪಂದಾ ಎಂದು ಧಮ್ಕಿ ಹಾಕಿದ್ದರು. ಬೆಳ್ತಂಗಡಿ ಠಾಣೆ ಪಿಎಸ್‌ಐ ಮುರುಳಿಧರ್ ಗೆ ಶಾಸಕ ಹರೀಶ್ ಪೂಂಜಾ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಶಾಸಕ ಹರೀಶ್ ಪೂಂಜ ಆಪ್ತರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಕಲ್ಲು ಕ್ವಾರಿ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿತ್ತು. ಬೆಳ್ತಂಗಡಿಯ ಮೇಲಂತಬೆಟ್ಟುವಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಈ ಸಂಬಂಧ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು.

- Advertisement -

ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ರೌಡಿ ಶೀಟರಗ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ ವೇಳೆ ಠಾಣೆಗೆ ಬಂದ ಶಾಸಕರು, ತಮ್ಮ ಪಕ್ಷದ ಕಾರ್ಯಕರ್ತನಾದ ಶಶಿರಾಜ್ ಶೆಟ್ಟಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.



Join Whatsapp