ಯೂಟ್ಯೂಬ್‌ ವೀಡಿಯೊದಲ್ಲಿ ಜಾತಿ ನಿಂದನೆ ಪದ ಬಳಸಿದುದಕ್ಕೆ ನಟಿ ಯುವಿಕಾ ಚೌಧರಿ ವಿರುದ್ಧ ಎಫ್‌ ಐಆರ್‌

Prasthutha|

ನವದೆಹಲಿ : ಯೂ ಟ್ಯೂಬ್‌ ವೀಡಿಯೊವೊಂದರಲ್ಲಿ ಜಾತಿ ನಿಂದನೆ ಹೇಳಿಕೆ ನೀಡಿದುದಕ್ಕಾಗಿ ನಟಿ ಯುವಿಕಾ ಚೌಧರಿ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ. ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಯುವಿಕಾ ವಿರುದ್ಧ ಕೇಸ್‌ ದಾಖಲಾಗಿದೆ.

- Advertisement -

ವೀಡಿಯೊದಲ್ಲಿ ನಟಿಯು ಪರಿಶಿಷ್ಟ ಜಾತಿ ಸಮುದಾಯಗಳ ವಿರುದ್ಧ ಆಕ್ಷೇಪಾರ್ಹ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂದು ದಲಿತ ಹೋರಾಟಗಾರ ರಜತ್‌ ಕಲ್ಸನ್ ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ.

ವೀಡಿಯೊ ಯೂಟ್ಯೂಬ್‌ ನಲ್ಲಿ ಅಪ್‌ ಲೋಡ್‌ ಆದ ಬಳಿಕ, #ArrestYuvikaChaudhary ಹ್ಯಾಶ್‌ ಟ್ಯಾಗ್‌ ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌ ಆಗಿದೆ. ತಮ್ಮ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಯುವಿಕಾ ಇನ್ಸ್‌ ಟಾಗ್ರಾಂನಲ್ಲಿ ಕ್ಷಮೆ ಯಾಚಿಸಿದ್ದಾರೆ. ತಾನು ಬಳಸಿದ ಪದದ ಅರ್ಥ ಗೊತ್ತಿರಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

Join Whatsapp