ಮುಂಬೈ: ಅಮಾನತುಗೊಂಡ ಐಎಎಸ್ ಅಧಿಕಾರಿ ಪೂಜಾ ಸಿಂಘಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೋ ಹಂಚಿಕೊಂಡಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್ ಅವರನ್ನು ಮುಂಬೈನಿಂದ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಗೃಹ ಸಚಿವರ ಮಾನಹಾನಿ ಮತ್ತು ದೇಶದ ನಾಗರಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಚಿತ್ರ ನಿರ್ಮಾಪಕರು ಈ ಫೋಟೋವನ್ನು ಶೇರ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಸದ್ಯ ದಾಸ್ ಅವರು ಹಂಚಿಕೊಂಡಿರುವ ಈ ಫೋಟೋವನ್ನು 2017ರಲ್ಲಿ ರಾಂಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆಗೆಯಲಾಗಿದೆ.
ಜಾರ್ಖಂಡ್’ನ ಮಾಜಿ ಗಣಿ ಇಲಾಖೆಯ ಕಾರ್ಯದರ್ಶಿ ಸಿಂಘಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಮೇ 12ರಂದು ಬಂಧಿಸಿತ್ತು. ಚಲನಚಿತ್ರ ನಿರ್ಮಾಪಕರಾದ ದಾಸ್ ಅವರು ಈ ಹಿಂದೆ ದೈನಿಕ್ ಬಾಸ್ಕರ್, ಪ್ರಭಾತ್ ಖಬರ್ ಮತ್ತು NDTV ಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.