ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣ : ಮುಖ ಮುಚ್ಚಿಕೊಂಡು ಓಡಾಡಲ್ಲ ಎಂದ ರಾಜ್ ಕುಂದ್ರಾ

Prasthutha|

ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ಉದ್ಯಮಿ ರಾಜ್ ಕುಂದ್ರಾ ಅವರು ಇಷ್ಟು ದಿನ ಮೌನ ವಹಿಸಿದ್ದರು. ಈ ಕೇಸ್ ಶುರುವಾದಾಗಿನಿಂದ ಅವರ ಪತ್ನಿ ಶಿಲ್ಪಾ ಶೆಟ್ಟಿ ಸೇರಿದಂತೆ ಇಡೀ ಕುಟುಂಬಕ್ಕೆ ಮುಜುಗರ ಆಗಿತ್ತು. ರಾಜ್ ಕುಂದ್ರಾ ಕೂಡ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಸೋಶಿಯಲ್ ಮೀಡಿಯಾದಿಂದಲೂ ಅವರು ಕಣ್ಮರೆ ಆಗಿದ್ದರು. ಈಗ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ. ನಾಚಿಕೆಯಿಂದ ಮುಖ ಮುಚ್ಕೊಂಡು ಓಡಾಡುವುದಿಲ್ಲ. ಕಾನೂನಿನ ರೀತಿಯಲ್ಲಿ ವಿಚಾರಣೆ ಎದುರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

- Advertisement -

ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅವರು ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಜು.19ರಂದು ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು. ಹಲವು ದಿನಗಳ ಕಾಲ ಅವರು ಜೈಲಿನಲ್ಲಿ ಕಳೆಯುವುದು ಅನಿವಾರ್ಯ ಆಗಿತ್ತು. ಎರಡು ತಿಂಗಳ ಕಾಲ ಜೈಲು ವಾಸ ಅನುಭವಿಸಿದ ಅವರು ಸೆ.22ರಂದು ಜಾಮೀನು ಪಡೆದು ಮನೆಗೆ ಮರಳಿದ್ದರು. ಆ ಬಳಿಕ ಎಲ್ಲಿಯೂ ಅವರು ಮಾತನಾಡಿರಲಿಲ್ಲ. ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ನಿರೀಕ್ಷಿಸುತ್ತಿದ್ದರು. ರಾಜ್ ಕುಂದ್ರಾ ಮೇಲೆ ಅನೇಕ ಆರೋಪಗಳಿವೆ. ಅವುಗಳ ಬಗ್ಗೆ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ.



Join Whatsapp