ಹೊಟೇಲ್’ನಲ್ಲಿ ಶವವಾಗಿ ಪತ್ತೆಯಾದ ಸಿನಿಮಾ ನಿರ್ದೇಶಕ

Prasthutha|

ಲಕ್ನೋ: ಹೊಟೇಲ್ ವೊಂದರಲ್ಲಿ ಸಿನಿಮಾ ನಿರ್ದೇಶಕರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸೋನ್ ಭದ್ರದಲ್ಲಿ ನಡೆದಿದೆ.

- Advertisement -


ಸುಭಾಷ್ ಚಂದ್ರ ತಿವಾರಿ ಮೃತ ನಿರ್ದೇಶಕ ಎಂದು ಗುರುತಿಸಲಾಗಿದೆ.


ಚಿತ್ರೀಕರಣಕ್ಕೆಂದು ಸೋನ್ ಭದ್ರದ ಹೊಟೇಲ್ ರೂಮ್ ವೊಂದರಲ್ಲಿ ತಮ್ಮ ತಂಡದೊಂದಿಗೆ ತಂಗಿದ್ದರು. ಬುಧವಾರ ರಾತ್ರಿ (ಮೇ.24 ರಂದು) ಅವರು ಶವವಾಗಿ ಪತ್ತೆಯಾಗಿದ್ದಾರೆ.
ಅವರ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಸ್ಟ್ ಮಾರ್ಟಂ ವರದಿ ಪಡೆದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧೀಕ್ಷಕ (ಎಸ್ಪಿ) ಯಶ್ವೀರ್ ಸಿಂಗ್ ಹೇಳಿದ್ದಾರೆ.

Join Whatsapp