ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

Prasthutha|

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ‌ ಎಂಬ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ ಮೇಲೆ ಮತ್ತೊಂದು ಎಫ್‌ಐಆರ್ ದಾಖಲು ಮಾಡಲಾಗಿದೆ. ಕ್ರಿಸ್‌ಮಸ್ ಹಬ್ಬದ ಅಲಂಕಾರದ ವಿಚಾರಕ್ಕೆ ಮಾಲ್‌ಗೆ ನುಗ್ಗಿ ಗಲಾಟೆ ಮಾಡಿರೋ ಆರೋಪ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

ನಿನ್ನೆ ಏಷ್ಯಾ ಮಾಲ್‌ ಬಳಿ ಹೋಗಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು, ಯಾಕೆ ಕ್ರಿಸ್ಮಸ್ ಟ್ರೀ ಗಳ ಅಲಂಕಾರ ಮಾಡಿದ್ದೀರಾ ಎಂದು ಮಾಲ್‌ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದರು. ಕ್ರಿಸ್‌ಮಸ್‌ ಟ್ರೀ ಅಲಂಕಾರ ಮಾಡಿದ್ದಲ್ಲದೇ 200 ರೂ ಎಂಟ್ರಿ ಫೀಸ್ ಬೇರೆ ಇಟ್ಟಿದ್ದೀರಾ? ಇದಕ್ಕೆ ಕಾನೂನು ಇದ್ಯಾ? ಹಿಂದೂ ಹಬ್ಬಗಳಿಗೆ ನೀವು ಇದೇ ರೀತಿಯ ಅಲಂಕಾರ ಮಾಡ್ತೀರ? 22-01-24 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅವತ್ತೂ ಹೀಗೆ ಅಲಂಕಾರ ಮಾಡಬೇಕು. ಮಾಡದಿದ್ರೆ ಮಾಲ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು.



Join Whatsapp