ಚುನಾವಣಾಧಿಕಾರಿಯ ದೂರಿನಂತೆ ವಿಜಯೇಂದ್ರ ವಿರುದ್ಧ FIR ದಾಖಲು

Prasthutha|

ಬೆಂಗಳೂರು: ಸಮಾಜದಲ್ಲಿ ದ್ವೇಷ ಭಾವನೆ ಸೃಷ್ಟಿ ಮತ್ತು ಮತ ಸೌಹಾರ್ಧತೆಗೆ ಧಕ್ಕೆ ತಂದ ಆರೋಪದಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ಕರ್ನಾಟಕ ಎಕ್ಸ್ ಖಾತೆ ನಿರ್ವಹಣೆ ಮಾಡುವವರ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

- Advertisement -

ಚುನಾವಣಾಧಿಕಾರಿ ಅರ್ಜುನ್ ಎಂಬುವರು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಠಾಣೆ ಪೊಲೀಸರು ವಿಜಯೇಂದ್ರ ಮತ್ತು ಬಿಜೆಪಿ ಕರ್ನಾಟಕ ಎಕ್ಸ್ ಖಾತೆ ನಿರ್ವಹಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಏ.19ರಂದು ಬಿಜೆಪಿಕರ್ನಾಟಕ’ ಎಕ್ಸ್ ಖಾತೆಯಲ್ಲಿ ‘ರಾಜ್ಯ ಕಾಂಗ್ರೆಸ್ ಪಾಕ್ ಸೈ ಸ್ತಾನ್ ಸರ್ಕಾರದಿಂದ ತಾಲಿಬಾನ್ ಮಾಡೆಲ್ ಜಾರಿ, ಜೈ ಶ್ರೀರಾಮ್ ಎಂದರೆ ಬ್ರದರ್ಸ್‌ಗಳಿಂದ ಹಲ್ಲೆ. ಲವ್ ಜಿಹಾದ್‌ಗೆ ಒಪ್ಪದೆ ಇದ್ದರೆ ಬರ್ಬರ ಕೊಲೆ, ಒಡೆಯರ್ ಪರ ನಿಂತರೆ ಕಾರು ಹರಿಸಿ ಕೊಲೆ, ಡ್ರಾಪ್ ಕೊಟ್ಟರೆ ಮತಾಂಧರಿಂದ ಹಿಗ್ಗಾ ಮುಗ್ಗಾ ಥಳಿತ, ಕನ್ನಡ ಮಾತನಾಡಿದರೆ ನಟಿಯ ಮೇಲೆ ಹಲ್ಲೆ ಯತ್ನ’, ಚುನಾವಣಾ ಸಮಯದಲ್ಲಿ ಜಿಹಾದಿ ಮತಾಂಧ ಬ್ರದರ್ಸ್‌ಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಆ ದಿನಗಳ ಕೊತ್ವಾಲ್ ಶಿಷ್ಯ ಡಿ.ಕೆ.ಶಿವಕುಮಾರ್ ಬೀದಿಗೆ ಬಿಟ್ಟು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬೆದರಿಸುತ್ತಿದ್ದಾರೆ. ಕರ್ನಾಟಕವನ್ನು ಮತಾಂಧರ ಗಲಭೆಯ ತೊಟವನ್ನಾಗಿ ಮಾಡಿದೆ ‘ರಾಹುಲ್‌ಗಾಂಧಿ ಅವರು ದ್ವೇಷದ ಅಂಗಡಿ’ ಎಂದು ಟ್ವೀಟ್ ಮಾಡಿರುವ X ಪೋಸ್ಟ್‌ಗಳನ್ನು ಚುನಾವಣಾಧಿಕಾರಿ ಅರ್ಜುನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -


ಈ ಪೋಸ್ಟ್‌ಗಳು ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಧರ್ಮ, ಭಾಷೆ, ಜಾತಿ, ವರ್ಗ ಮತ್ತು ಇತ್ಯಾದಿಗಳ ಮಧ್ಯೆ ದ್ವೇಷ ಭಾವನೆ ಉಂಟು ಮಾಡಿ ವೈರತ್ವ ಹುಟ್ಟು ಹಾಕಿ ಪರಸ್ಪರ ಸೌಹಾರ್ದತೆಗೆ ಭಂಗವುಂಟು ಮಾಡಲು ಪ್ರಯತ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ಕರ್ನಾಟಕದ ಎಕ್ಸ್ ಖಾತೆ ನಿರ್ವಹಣೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಅರ್ಜುನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.



Join Whatsapp