ಶಿರವಸ್ತ್ರ ಪರವಾಗಿ ಹೋರಾಟ: ವಿದ್ಯಾರ್ಥಿಗಳ ಧೈರ್ಯ ಪ್ರಶಂಸಿಸಿದ ಸಜ್ಜಾದ್ ನೂಮಾನಿ

Prasthutha|

ನವದೆಹಲಿ: ಶಿರವಸ್ತ್ರ ನಿಷೇಧ ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳ ಧೈರ್ಯ ಮತ್ತು ಸ್ಥೈರ್ಯವನ್ನು ಖ್ಯಾತ ಧಾರ್ಮಿಕ ವಿದ್ವಾಂಸ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯ ಸಜ್ಜಾದ್ ನುಮಾನಿ ಕೊಂಡಾಡಿದ್ದಾರೆ.

- Advertisement -

ಹಿಜಾಬ್ ಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಅವರು, ನನ್ನ ಪರವಾಗಿ, ನನ್ನ ಕುಟುಂಬ ಮತ್ತು ಎಲ್ಲಾ ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರ ಪರವಾಗಿ, ನಿಮ್ಮ ಧೈರ್ಯದ ನಿಲುವನ್ನು ನಾನು ಪ್ರಶಂಸಿಸುತ್ತೇನೆ. ಸತ್ಯಕ್ಕಾಗಿ ದೃಢವಾಗಿ ನಿಲ್ಲುವವರನ್ನು ಅಲ್ಲಾಹನು ಪ್ರೀತಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ ಎಂದು ಸಜ್ಜಾದ್ ನುಮಾನಿ ಟ್ವೀಟ್ ಮಾಡಿದ್ದಾರೆ.

Join Whatsapp