ಫಿಫಾ ವಿಶ್ವಕಪ್‌ | ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಸ್ಪೇನ್‌ ಔಟ್‌ ! ಕ್ವಾರ್ಟರ್‌ ಫೈನಲ್‌ಗೆ ಮೊರಕ್ಕೊ

Prasthutha|

ಆಫ್ರಿಕನ್‌ ರಾಷ್ಟ್ರ ಮೊರಕ್ಕೊ, ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.

- Advertisement -

ಎಜುಕೇಶನ್‌ ಸಿಟಿ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊರಕ್ಕೊ, ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಸ್ಪೇನ್‌ ತಂಡವನ್ನು ಮಣಿಸಿತು.

ಪಂದ್ಯದ ಪೂರ್ಣಾವಧಿಯಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲರಾದ ಕಾರಣ, ಹೆಚ್ಚುವರಿ ಅವಧಿಗೆ ಪಂದ್ಯ ಮುಂದೂಡಲ್ಪಟ್ಟಿತ್ತು. ಆದರೆ ಈ ವೇಳೆಯೂ ಉಭಯ ತಂಡಗಳ ಆಟಗಾರರು ಗೋಲು ಬಲೆಯ ಗುರಿಯನ್ನು ತಲುಪಲು ವಿಫಲರಾದರು.

- Advertisement -

ಬಳಿಕ ನೀಡಲಾದ ನಿರ್ಣಾಯಕ ಪೆನಾಲ್ಟಿ ಶೂಟೌಟ್‌ನಲ್ಲಿ ಮೊರಕ್ಕೊ ಗೋಲ್‌ ಕೀಪರ್‌ ಯಾಸಿನ್ ಬೌನೌ, ಸ್ಪೇನ್‌ನ ತಾರಾ ಆಟಗಾರರಿಗೆ ತಡೆಗೋಡೆಯಾದರು. ಸ್ಪೇನ್‌ನ ಮೂರೂ ಪ್ರಯತ್ನಗಳನ್ನು ತಡೆಯುವಲ್ಲಿ ಬೌನೌ ಯಶಸ್ವಿಯಾದರು. ಆ ಮೂಲಕ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊರಾಕ್ಕೊ, ಫಿಫಾ ವಿಶ್ವಕಪ್‌ ಟೂರ್ನಿಯ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ಕಳೆದ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲೂ ಸ್ಪೇನ್‌ ಅಂತಿಮ 16ರ ಘಟ್ಟದಲ್ಲಿ ಆತಿಥೇಯ ರಷ್ಯಾ ತಂಡಕ್ಕೆ ಪೆನಾಲ್ಟಿ ಶೂಟೌಟ್‌ನಲ್ಲಿ ಶರಣಾಗಿತ್ತು. ಈ ಬಾರಿಯೂ ಸ್ಪೇನ್‌ ಪಯಣ 16 ಘಟ್ಟದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲೇ ಅಂತ್ಯಕಂಡಿದೆ.

ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಖುಷಿಯಲ್ಲಿ ಮೊರಾಕ್ಕೊ, ಮೈದಾನದಲ್ಲೇ ಸಾಷ್ಟಾಂಗ ಎರಗಿ, ಸಂಭ್ರಮಿಸಿದರು.



Join Whatsapp