ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಶುಕ್ರವಾರ ತೆರೆಬಿದ್ದಿದೆ. 8 ಗುಂಪು 32 ತಂಡಗಳೊಂದಿಗೆ ನವೆಂಬರ್ 20ರಂದು ಆರಂಭವಾಗಿದ್ದ ಪ್ರತಿಷ್ಠಿತ ಟೂರ್ನಿಯಲ್ಲಿ ಇದೀಗ 16 ತಂಡಗಳು ನಾಕೌಟ್ ಹೋರಾಟಕ್ಕೆ ಸಜ್ಜಾಗಿದೆ. ಶನಿವಾರದಿಂದ ʻಸೂಪರ್ 16ʼ (ಪ್ರಿ ಕ್ವಾರ್ಟರ್ ಫೈನಲ್) ಆರಂಭವಾಗಲಿದೆ.
ಬಲಿಷ್ಠ ತಂಡಗಳಾದ 4 ಬಾರಿಯ ಚಾಂಪಿಯನ್ ಜರ್ಮನಿ, ಬೆಲ್ಜಿಯಂ, ಉರುಗ್ವೆ, ಹಾಗೂ ಮೆಕ್ಸಿಕೊ ತಂಡಗಳು ಈ ಬಾರಿ ಗುಂಪು ಹಂತದಲ್ಲೇ ಹೊರನಡೆದಿದೆ. ಮತ್ತೊಂದೆಡೆ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಸ್ವಿಜರ್‌ಲ್ಯಾಂಡ್ ಹಾಗೂ ಪೋಲೆಂಡ್ ತಂಡಗಳು ಅಚ್ಚರಿ ಎಂಬಂತೆ ಅಂತಿಮ 16ರ ಘಟ್ಟ ಪ್ರವೇಶಿಸಿದೆ.
ಡಿಸೆಂಬರ್ 3ರಿಂದ (ಶನಿವಾರ) 6ರವರೆಗೆ ಪ್ರಿ ಕ್ವಾರ್ಟರ್ ಫೈನಲ್ ನಡೆಯಲಿದ್ದು, ಡಿಸೆಂಬರ್ 9ರಿಂದ 8 ತಂಡಗಳನ್ನು ಒಳಗೊಂಡ ಕ್ವಾರ್ಟರ್ ಫೈನಲ್ ಆರಂಭವಾಗಲಿದೆ. ಖಲೀಫಾ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ 8.30ಕ್ಕೆ ನಡೆಯುವ 16ರ ಘಟ್ಟದ ಮೊದಲ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ –ಅಮೆರಿಕ ತಂಡಗಳು ಮುಖಾಮುಖಿಯಾಗಲಿದೆ.
ʻಸೂಪರ್ 16ʼ ವೇಳಾಪಟ್ಟಿ
ಡಿಸೆಂಬರ್ 3 (ಶನಿವಾರ)
ನೆದರ್‌ಲ್ಯಾಂಡ್ಸ್ vs ಅಮೆರಿಕ | ಸಮಯ: ರಾತ್ರಿ 8:30 | ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣ
ಅರ್ಜೆಂಟೀನಾ vs ಆಸ್ಟ್ರೇಲಿಯಾ | ಸಮಯ: ಮಧ್ಯರಾತ್ರಿ 12:30 | ಅಹ್ಮದ್ ಬಿನ್ ಅಲಿ ಕ್ರೀಡಾಂಗಣ
ಡಿಸೆಂಬರ್ 4 (ಭಾನುವಾರ)
ಫ್ರಾನ್ಸ್ vs ಪೋಲೆಂಡ್ | ಸಮಯ: ರಾತ್ರಿ 8:30 | ಅಲ್ ತುಮಾಮಾ ಕ್ರೀಡಾಂಗಣ
ಇಂಗ್ಲೆಂಡ್ vs ಸೆನೆಗಲ್ | ಸಮಯ: ಮಧ್ಯರಾತ್ರಿ 12:30 | ಅಲ್ ಬೈತ್ ಸ್ಟೇಡಿಯಂ
ಡಿಸೆಂಬರ್ 5 (ಸೋಮವಾರ)
ಜಪಾನ್ vs ಕ್ರೊಯೇಷಿಯಾ | ಸಮಯ: ರಾತ್ರಿ 8:30 | ಅಲ್ ಜನೌಬ್ ಕ್ರೀಡಾಂಗಣ
ಬ್ರೆಜಿಲ್ vs ದಕ್ಷಿಣ ಕೊರಿಯಾ | ಪಂದ್ಯ ಪ್ರಾರಂಭ : ಮಧ್ಯರಾತ್ರಿ 12:30 | : ಸ್ಟೇಡಿಯಂ 974
ಡಿಸೆಂಬರ್ 6 (ಮಂಗಳವಾರ)
ಮೊರಾಕೊ vs ಸ್ಪೇನ್ | ಪಂದ್ಯ ಪ್ರಾರಂಭ: ರಾತ್ರಿ; 8:30 | ಎಜುಕೇಶನ್ ಸಿಟಿ ಕ್ರೀಡಾಂಗಣ
ಪೋರ್ಚುಗಲ್ vs ಸ್ವಿಜರ್‌ಲ್ಯಾಂಡ್ | ಪಂದ್ಯ ಪ್ರಾರಂಭ: ಮಧ್ಯರಾತ್ರಿ 12:30 | ಲುಸೈಲ್ ಕ್ರೀಡಾಂಗಣ