ಭಾರತದ ಫುಟ್ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ

Prasthutha|

ನವದೆಹಲಿ: ಭಾರತದಲ್ಲಿ ಅತಿಯಾದ ಅನ್ಯರ ಹಸ್ತಕ್ಷೇಪ ನಡೆದಿರುವುದರಿಂದ ಜಾಗತಿಕ ಫುಟ್ಬಾಲ್ ಸಂಸ್ಥೆಯಾದ ಫಿಫಾ ಭಾರತದ ಎಐಎಫ್ ಎಫ್ ಫುಟ್ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದೆ.

- Advertisement -

ಮಂಗಳವಾರ ಆಗಸ್ಟ್ 16ರ ಬೆಳಿಗ್ಗೆಯಿಂದಲೇ ಈ ಅಮಾನತು ಜಾರಿಗೆ ಬರುವಂತೆ ಫಿಫಾ ತೀರ್ಮಾನ ತೆಗೆದುಕೊಂಡಿದೆ.

ಇಂತಹ ಅನಗತ್ಯ ಪಟ್ಟಭದ್ರರ ಹಸ್ತಕ್ಷೇಪದ ಕಾರಣಕ್ಕೆ ಅಕ್ಟೋಬರ್ 11- 30ರ ನಡುವೆ ನಡೆಸಲು ನಿರ್ಧರಿಸಿದ್ದ ಅಂಡರ್ 17 ಫಿಫಾ ಮಹಿಳಾ ವಿಶ್ವ ಕಪ್ ಪಂದ್ಯಾವಳಿ ನಡೆಸುವುದು ಸಾಧ್ಯವಿಲ್ಲ ಎಂದು ಸಹ ಫಿಫಾ ತಿಳಿಸಿದೆ.



Join Whatsapp