ನೈಜೀರಿಯಾದಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್‌‌ಗಳ ಸರಣಿ ದಾಳಿ: 18 ಮಂದಿ ಸಾವು

Prasthutha|

ನೈಜೀರಿಯಾ: ಇಲ್ಲಿ ಈಶಾನ್ಯ ಬೊರ್ನೊ ರಾಜ್ಯದಲ್ಲಿ ಶನಿವಾರ ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್‌‌ಗ ಸರಣಿ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಗ್ವೋಜಾ ಪಟ್ಟಣದಲ್ಲಿ ಮದುವೆ, ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿದೆ.

ಬೋರ್ನೊ ರಾಜ್ಯ 15 ವರ್ಷಗಳಿಂದ ಸಂಘರ್ಷದ ಕೇಂದ್ರಬಿಂದುವಾಗಿದೆ. ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.
ನೈಜೀರಿಯಾದ ಮಿಲಿಟರಿ ಉಗ್ರಗಾಮಿ ಗುಂಪುಗಳನ್ನು ದುರ್ಬಲಗೊಳಿಸಿದ್ದರೂ ದಾಳಿ ಮುಂದುವರೆಯುತ್ತಿದೆ. ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದಾರೆ.

- Advertisement -

ಬೊರ್ನೊ ಸ್ಟೇಟ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಮುಖ್ಯಸ್ಥ ಬಾರ್ಕಿಂಡೋ ಸೈದು ಅವರು ಸರಣಿ ಸ್ಪೋಟದಲ್ಲಿ ಮಕ್ಕಳು, ವಯಸ್ಕರು ಮತ್ತು ಗರ್ಭಿಣಿಯರ ಒಳಗೊಂಡಿರುವ ಸಾವುಗಳನ್ನು ದೃಢಪಡಿಸಿದ್ದಾರೆ. ದಾಳಿಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Join Whatsapp