ರಷ್ಯಾ ದಾಳಿ ಭೀತಿ: ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸೂಚನೆ

Prasthutha|

ಮಾಸ್ಕೊ: ರಷ್ಯಾದಿಂದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಉಕ್ರೇನ್ ನಲ್ಲಿರುವ ಮುಖ್ಯವಾಗಿ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಭಾರತಕ್ಕೆ ಹಿಂದಿರುಗುವಂತೆ ಭಾರತ ಸರ್ಕಾರ ಸೂಚಿಸಿದೆ.

- Advertisement -

ಗೊಂದಲದ ಮತ್ತು ಭೀತಿಯ ವಾತಾವರಣ ಉಂಟಾಗುತ್ತಲೇ ಉಕ್ರೇನ್ ನಲ್ಲಿ ವಿಮಾನ ದರಗಳನ್ನೆಲ್ಲ ಏರಿಸಲಾಗಿದೆ ಆದ್ದರಿಂದ ನಮ್ಮಂಥ ವಿದ್ಯಾರ್ಥಿಗಳು ಈಗ ವಾಪಾಸಾಗುವುದೂ ಕಷ್ಟ ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಹೇಳಿದರು.

ಉಕ್ರೇನ್ ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಯಥಾ ಪ್ರಕಾರ ಕೆಲಸ ಮಾಡಲಿದೆ. ಅದಕ್ಕೆ ಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿರುವ ಭಾರತೀಯರು ತಾತ್ಕಾಲಿಕವಾಗಿ ದೇಶ ಬಿಡಬೇಕಾದ ಸ್ಥಿತಿ ಈಗ ಇಲ್ಲಿ ಇಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದೆ.

- Advertisement -

ರಷ್ಯಾ ದಾಳಿ ಆಗುತ್ತದೆ ಎಂದು ಯುಎಸ್ ಎ ಕೂಗೆಬ್ಬಿಸಿರುವಂತೆಯೇ ರಷ್ಯಾ ಅತ್ಯುನ್ನತ ರಾಜತಾಂತ್ರಿಕರು ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಕ್ರೆಮ್ಲಿನ್ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುತ್ತದೆ ಎಂದು ಮನದಟ್ಟು ಮಾಡುವಂತೆ ಕೇಳಿಕೊಂಡಿದ್ದಾರೆ. ಉಕ್ರೇನ್ ಸಹಿತ ರಷ್ಯಾ ಹಿಂದಿನ ಭಾಗವಾಗಿದ್ದ ದೇಶಗಳನ್ನು ನ್ಯಾಟೋ ಸದಸ್ಯ ರಾಷ್ಟ್ರಗಳಾಗಿಸಿಕೊಳ್ಳುವುದಿಲ್ಲ ಎಂಬ ಆಶ್ವಾಸನೆ ಮಾತ್ರ ರಷ್ಯಾಕ್ಕೆ ಬೇಕಾಗಿದೆ ಎಂದು ಹೇಳಲಾಗಿದೆ. ಉಕ್ರೇನ್ ನ್ಯಾಟೋ ಸದಸ್ಯ ದೇಶವಾದಲ್ಲಿ ನ್ಯಾಟೋ ಸೇನೆ ಅಲ್ಲಿ ನೆಲೆಯಾಗುವುದು ರಷ್ಯಾಕ್ಕೆ ಇಷ್ಟವಿಲ್ಲ. ಆದರೆ ಪಾಶ್ಚಾತ್ಯ ದೇಶಗಳು ರಷ್ಯಾದ ಬೇಡಿಕೆಗೆ ಇನ್ನೂ ಸ್ಪಂದಿಸಿಲ್ಲ.

Join Whatsapp