ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ಆರ್ ಎಸ್ ಎಸ್ ಸಹ ಸಂಘಟನೆ ಬಜರಂಗದಳದ ಕಾರ್ಯರ್ತರನ್ನು ಪೊಲೀಸರು ಬಂಧಿಸಿದ್ದಾರೆ.
“ಹಂತಕರು ಹತ್ಯೆಯ ದಿನ ಆಯುಧಗಳ ಜೊತೆ ದೇವಸ್ಥಾನಕ್ಕೆ ಹೋಗಿದ್ದರು” ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 28ರ ಬೆಳಿಗ್ಗೆ ಸುಹಾಸ್ ಶೆಟ್ಟಿ ತನ್ನ ಸ್ನೇಹಿತನ ಜೊತೆ ಬಾಡಿಗೆ ಪಡೆದ ಕಾರು ಹಾಗೂ ಆಯುಧವನ್ನು ತೆಗೆದು ಕೊಂಡು ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾಕ್ಕೆ ಹೋಗಿದ್ದಾರೆ. ಬಳಿಕ ಸಂಜೆ ವೇಳೆಗೆ ಮಂಗಳೂರಿನಲ್ಲಿ ಸೇರಿದ ಆರೋಪಿಗಳು ಫಾಝಿಲ್ ಹತ್ಯೆಯ ಪ್ಲಾನ್ ಮಾಡಿ. ಬಳಿಕ ರಾತ್ರಿ 8.30 ಸುಮಾರಿಗೆ ಫಾಝಿಲ್ ಹತ್ಯೆ ಮಾಡುತ್ತಾರೆ ಎಂದು ಕಮಿಷನರ್ ಹೇಳಿದ್ದಾರೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ಶ್ರೀನಿವಾಸ್ ಯಾನೆ ಶೀನು , ಕಟೀಲು ಕಲ್ವಾರ್ ನಿವಾಸಿ ಸುಹಾಸ್ ಶೆಟ್ಟಿ , ಸುರತ್ಕಲ್ ಕೃಷ್ಣಾಪುರ ನಿವಾಸಿ ಅಭಿ ಯಾನೆ ಅಭಿಷೇಕ್ , ಸುರತ್ಕಲ್ ಕುಲಾಯಿ ನಿವಾಸಿ ಮೋಹನ್ ಮತ್ತು ಗಿರಿ ಬಂಧಿತ ಆರೋಪಿಗಳು.