ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ನೂತನ ರಾಜ್ಯಾಧ್ಯಕ್ಷರಾಗಿ ಫಾತಿಮಾ ನಸೀಮಾ, ಪ್ರಧಾನ ಕಾರ್ಯದರ್ಶಿಯಾಗಿ ನಶ್ರಿಯ ಬೆಳ್ಳಾರೆ ಆಯ್ಕೆ

Prasthutha|

ಮೈಸೂರು: ವಿಮೆನ್ ಇಂಡಿಯಾ ಮೂಮೆಂಟ್ (WIM), ಕರ್ನಾಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.

- Advertisement -

ಅಧ್ಯಕ್ಷರಾಗಿ ಫಾತೀಮಾ ನಸೀಮಾ ಅವರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಶ್ರಿಯ ಬೆಳ್ಳಾರೆ ಅವರನ್ನು ಚುನಾಯಿಸಲಾಯಿತು. ಪ್ರೊ. ಪ್ರಮೀಳಾ, ಮೈಸೂರು ಮತ್ತು ಶಾಜಿಯಾ, ಬೆಂಗಳೂರು ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಯಿದಾ ಭುಟ್ಟೋ, ಬೆಂಗಳೂರು ಮತ್ತು ತನುಜಾವತಿ, ಮಡಿಕೇರಿ ಆವರನ್ನು ಕಾರ್ಯದರ್ಶಿಗಳಾಗಿ ಘೋಷಿಸಲಾಯಿತು. ಖಜಾಂಚಿಯಾಗಿ ರಿಹಾನ ಗುಲ್ಬರ್ಗ ಅವರು ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ ಶಹೀದಾ ತಸ್ನೀಮ್ – ಮಂಗಳೂರು, ಮೇರಿ ವೇಗಸ್ – ಮಡಿಕೇರಿ, ಆಯಿಷಾ ಬಜ್ಪೆ, ನಿಕತ್ ಮಂಡ್ಯ, ಶಬಾನ – ಬೆಂಗಳೂರು, ಶ್ರೇಯ ಶರೀಫ್ – ಬೆಂಗಳೂರು ಅವರನ್ನು ಆರಿಸಲಾಯಿತು.

ರಾಷ್ಟ್ರೀಯ ಉಪಾಧ್ಯಕ್ಷರಾದ ರೈಹಾನ ನೂತನ ಪ್ರದಾಧಿಕಾರಿಗಳ ಚುನಾವಣೆ ಮತ್ತು ಘೋಷಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

- Advertisement -

ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಮಾವೇಶ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಯಿತು. ಸಮಾವೇಶದಲ್ಲಿ ದೇಶ ಮತ್ತು ರಾಜ್ಯದಲ್ಲಿ ಪ್ರಸ್ತುತ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ಮತ್ತು ಉಪನ್ಯಾಸ ಏರ್ಪಡಿಸಲಾಗಿತ್ತು. ಬಿಲ್ಕಿಸ್ ಬಾನೋ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲಿನ ದೌರ್ಜನ್ಯಗಳ ವಿಷಯದ ಮೇಲೆ ಹೆಚ್ಚು ಒತ್ತು ಕೊಡಲಾಗಿತ್ತು.



Join Whatsapp