ಮಗಳ ಮೃತದೇಹವನ್ನು ಕಿಲೋಮೀಟರ್ ಗಟ್ಟಲೆ ಹೊತ್ತು ನಡೆದ ತಂದೆ !

Prasthutha|

ಛತ್ತೀಸ್ಗಡ್: ತೀವ್ರ ಜ್ವರದಿಂದ ಬಳಲಿ ಕೊನೆಯುಸಿರೆಳೆದಿದ್ದ ಮಗಳ ಮೃತದೇಹವನ್ನು ಸುಮಾರು 10 ಕಿ.ಮೀ ನಷ್ಟು ತಂದೆಯೇ ಹೊತ್ತು ನಡೆದ ಹೃದಯ ವಿದ್ರಾವಕ ಘಟನೆ ಛತ್ತೀಸ್ಗಡ್ ನ ಲಖನಪುರ್‌ನಲ್ಲಿ ನಡೆದಿದೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ಡ್ಯೂ ತನಿಖೆಗೆ ಆದೇಶಿಸಿದ್ದಾರೆ.

- Advertisement -

7ವರ್ಷದ ಮೃತ ಸುರೇಖಾಳನ್ನು ತಂದೆ ಈಶ್ವರ್ ದಾಸ್ ಅನಾರೋಗ್ಯದ ಕಾರಣದಿಂದ ಲಖನಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಖಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬಳಿಕ ಶವ ಕೊಂಡೊಯ್ಯಲು ಆಂಬುಲೆನ್ಸ್ ಬಾರದ ಕಾರಣ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ತಂದೆ ಊರ ಕಡೆ ಸಾಗಿದ್ದಾರೆ.

ಮಗಳ ಮೃತದೇಹ ಹೊತ್ತು ಸಾಗುವ ವೀಡಿಯೋ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸರಕಾರದ ಹದಗೆಟ್ಟ ಆರೋಗ್ಯ ವ್ಯವಸ್ಥೆಗೆ ಛೀಮಾರಿ ಹಾಕಿದ್ದಾರೆ. ಕೂಡಲೇ ಎಚ್ಚೆತ್ತ ರಾಜ್ಯ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ಡ್ಯೂ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.




Join Whatsapp