ಬೆಳಗಾವಿ: ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ತಂದೆ-ಮಗ ಇಬ್ಬರನ್ನೂ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಬಸಪ್ಪ ರಂಗಪ್ಪ ಲಗಳಿ(77) ಮತ್ತು ಅವರ ಪುತ್ರ ಸಿದ್ದಪ್ಪ ಬಸಪ್ಪ ಲಗಳಿ(40) ಬಂಧಿತರು. ಬಂಧಿತರಿಂದ 204 ಕೆಜಿ ತೂಕದ ಹಸಿ ಗಾಂಜಾ ಬೆಳೆ ಜಪ್ತಿ ಮಾಡಲಾಗಿದೆ.
ತಂದೆ ಮತ್ತು ಮಗ ಹೊನಕುಪ್ಪಿ ಗ್ರಾಮದ ಹದ್ದಿನಲ್ಲಿ ಇರುವ ಸರ್ವೇ ನ.316/4ರ ತಮ್ಮ ಕಬ್ಬಿನಗದ್ದೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.