ಹೈದರಾಬಾದ್ : ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮಗಳಿಗೆ ಸೆಲ್ಯೂಟ್ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ, ಜನ ಮೆಚ್ಚುಗೆ ಪಡೆದಿದೆ.
ಹೌದು, ತಮಗಿಂತ ಹಿರಿಯ ಅಧಿಕಾರಿಯಾಗಿ ಮಗಳೇ ತಮ್ಮ ಮುಂದೆ ಬಂದು ನಿಂತಾಗ ಸರ್ಕಲ್ ಇನ್ಸ್ ಪೆಕ್ಟರ್ ವೈ. ಶಾಮ್ ಸುಂದರ್ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿದ್ದಾರೆ.
ತಿರುಪತಿಯಲ್ಲಿ ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಾಮ್ ಸುಂದರ್ ತಮ್ಮ ಮಗಳು ಜೆಸ್ಸಿ ಪ್ರಶಾಂತಿ ಅವರಿಗೆ ಸೆಲ್ಯೂಟ್ ಮಾಡಿದ್ದಾರೆ. ಜೆಸ್ಸಿ ಇತ್ತೀಚೆಗೆ ಗುಂಟೂರು ಜಿಲ್ಲೆಯ ಡಿಎಸ್ ಪಿಯಾಗಿ ನೇಮಕಗೊಂಡಿದ್ದಾರೆ
ಕರ್ತವ್ಯಕ್ಕೆ ಹಾಜರಾದ ಬಳಿಕ ಕರ್ತವ್ಯ ವೇಳೆ ಮೊದಲ ಬಾರಿ ತಂದೆ ಮಗಳು ಇಬ್ಬರೂ ಎದುರಾಗಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಸೆಲ್ಯೂಟ್ ಮಾಡಿದ್ದಾರೆ. ಈ ಫೋಟೊವನ್ನು ಆಂಧ್ರ ಪ್ರದೇಶ ಪೊಲೀಸ್ ತನ್ನ ಅಧಿಕೃತ ಖಾತೆಯಲ್ಲೇ ಟ್ವೀಟ್ ಮಾಡಿದ್ದು, ಇದು ನಿಜಕ್ಕೂ ಅಪರೂಪದ ಮತ್ತು ಹೃದಯ ತುಂಬುವ ದೃಶ್ಯ ಎಂದು ವರ್ಣಿಸಿದ್ದಾರೆ. ತಿರುಪತಿಯಲ್ಲಿ ಜ.4ರಿಂದ 7ರ ವರೆಗೆ ಆಂಧ್ರ ಪ್ರದೇಶ ಪೊಲೀಸ್ ಡ್ಯೂಟಿ ಮೀಟ್ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.