ಬೆಳಗಾವಿ: ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ತೋರಿಸಿ ಎಂದು ಕೇಳಿದ್ದಕ್ಕೆ ಟಿಸಿ ಸೇರಿ ಐವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ತೆ ಸೇರಿದ ಐವರಲ್ಲಿ ಅಟೆಂಡರ್ ಸಾವನ್ನಪ್ಪಿದ್ದಾರೆ
ಪಾಂಡಿಚೇರಿಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನ ಎಸ್ 8 ಬೋಗಿಯಲ್ಲಿ ಟಿಸಿ ಮೇಲಿನ ಹಲ್ಲೆ ತಡೆಯಲು ಹೋಗಿದ್ದ ಕೋಚ್ ಅಟೆಂಡರ್ ಮತ್ತು ಸಹಪ್ರಯಾಣಿಕರ ಮೇಲೆ ಮುಸುಕುಧಾರಿಯೊಬ್ಬ ಮನಸೋ ಇಚ್ಚೆ ಚಾಕು ಇರಿದಿದ್ದ.
ಟಿಸಿ, ಅಟೆಂಡರ್ ಮತ್ತು ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರಿನದಾಗಿ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಯುತ್ತಿರುವಾಗಲೇ ಅಟೆಂಡರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.