ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 30 ದಿನಗಳಲ್ಲೇ ಜೀವಾವಧಿ ಶಿಕ್ಷೆ!

Prasthutha|

ಇದು ಗುಜರಾತ್ ಇತಿಹಾಸದಲ್ಲೇ ಮೊದಲು!

- Advertisement -

ಸೂರತ್: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಒಂದು ತಿಂಗಳೊಳಗೆ ಗುಜರಾತ್ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಮಕ್ಕಳನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸುವ ಕಾನೂನಿನ ಅಡಿಯಲ್ಲಿ ಸೂರತ್ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಧೀಶೆ ಪಿ.ಎಸ್. ಕಲಾ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

- Advertisement -

1ಲಕ್ಷ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಉತ್ತರ ಪ್ರದೇಶ ಮೂಲದ ನಿಶಾದ್ ಎಂಬ ಯುವಕನನ್ನು ಸೂರತ್ ಪೊಲೀಸರು ಅಕ್ಟೋಬರ್ 13ರಂದು ಬಂಧಿಸಿದ್ದರು. ಆರೋಪಿಯು ಸಚಿನ್ ಜಿಐಡಿಸಿ ಪ್ರದೇಶದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ.

ನಂತರ ಪೊಲೀಸರು ತನಿಖೆ ನಡೆಸಿದಾಗ ನಿರ್ಜನ ಪ್ರದೇಶದಲ್ಲಿ ಬಾಲಕಿ ಪತ್ತೆಯಾಗಿದ್ದಳು. ನಿಶಾದ್ ಬಂಧನವಾದ 10 ದಿನಗಳಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ನಡುವೆ ನ್ಯಾಯಾಲಯವು ಅಕ್ಟೋಬರ್ 25 ರಿಂದ ಐದು ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿದೆ.

ಗುಜರಾತ್ ನ ವಿಚಾರಣಾ ನ್ಯಾಯಾಲಯವೊಂದು ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ತೀರ್ಪು ನೀಡಿರುವುದು ಇದೇ ಮೊದಲು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ವಿಚಾರಣೆಗಾಗಿ ದಿನಗಳಲ್ಲಿ ನ್ಯಾಯಾಲಯವು ಮಧ್ಯರಾತ್ರಿ 12 ರವರೆಗೆ ತೆರೆದಿತ್ತು ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

Join Whatsapp