ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ಲಿಂ ಲೀಗ್ ನಾಯಕರಾದ ಚಂದೇರದ ಪೂಕೋಯ ತಂಙಳ್, ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್ ಸೆಕ್ರೆಟರಿ ಸಂಜಯ್‌ಎಂ. ಕೌಲ್ ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆಗೆ ಮೇಲ್ನೋಟ ವಹಿಸುವ ಕಣ್ಣೂರು ಕ್ರೈಂ ಬ್ರ್ಯಾಂಚ್ ಎಸ್‌ಪಿ ಪಿ.ವಿ. ಸದಾನಂದನ್ ಅವರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.
ಕಂಪೆನಿಯ ಚೇರ್ಮನ್ ಆಗಿರುವ ಖಮರುದ್ದೀನ್, ಪೂಕೋಯ ತಂಙಳ್ ಅವರ ಹೆಸರಿನಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳನ್ನೊಳಗೊಂಡ ಫ್ಯಾಶನ್ ಆರ್ನಮೆಂಟ್ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲೇಜ್‌ನಲ್ಲಿ ಪೂಕೋಯ ತಂಙಳ್ ಹೆಸರಿನಲ್ಲಿರುವ 1 ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳಲ್ಲಿ ಒಳಗೊಂಡಿದೆ.