ನೆಹರೂ ಪಟೇಲ್ ಕಣ್ಣಾರೆ ಕಂಡಿದ್ದೇನೆ, ನೀವು ನೋಡಿದ್ದೀರಾ? ಮೋದಿಗೆ ಫಾರೂಕ್ ಅಬ್ದುಲ್ಲಾ ಪ್ರಶ್ನೆ

Prasthutha|

- Advertisement -

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಹಿರಿಯ ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಅವರು ನರೇಂದ್ರ ಮೋದಿ ಸರಕಾರದ ಕೃಷಿ ವಿರೋಧಿ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.  ಕೃಷಿ ಕಾನೂನುಗಳು ವೇದ ಪುಸ್ತಕವೇನೂ ಅಲ್ಲ, ಅದನ್ನು ಪರಿಷ್ಕರಣೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಅವರು ಗಾಂಧೀಜಿ, ಪಟೇಲ್ ಮತ್ತು ನೆಹರೂ ಅವರನ್ನು ಉಲ್ಲೇಖಿಸಿ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದರು.

‘ಹಿಂದಿನ ಪ್ರಧಾನ ಮಂತ್ರಿಗಳನ್ನು ಟೀಕಿಸುವುದು ಭಾರತದ ಸಂಪ್ರದಾಯವಲ್ಲ. ನಾನು ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯನ್ನು ನೋಡಿದ್ದೇನೆ. ನನ್ನ ಸರ್ಕಾರ ವಿಸರ್ಜನೆಯಾದಾಗ ಇಂದಿರಾಗಾಂಧಿಯನ್ನು ನೋಡಿದ್ದೇನೆ. ನನ್ನ ತಂದೆಯನ್ನು ನೆಹರೂ ಜೈಲಿನಲ್ಲಿರಿಸುವುದನ್ನು ನಾನು ನೋಡಿದ್ದೇನೆ. ಆದರೆ ಅವರು ನೆಹರೂ ಬಗ್ಗೆ ಕೆಟ್ಟ ಮಾತನಾಡುವುದನ್ನು ನಾನು ಕೇಳಲಿಲ್ಲ. ನಾನೊಬ್ಬ ಮುಸ್ಲಿಮನಾಗಿದ್ದೇನೆ. ಭಾರತೀಯ ಮುಸ್ಲಿಂ. ನಾವು ಒಟ್ಟಾಗಿ ದೇಶವನ್ನು ಮುಂದಕ್ಕೆ ಸಾಗಿಸಬೇಕು. ರೈತರೊಂದಿಗೆ ಮಾತನಾಡಲು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಾವು ಅವರೊಂದಿಗೆ ಮಾತನಾಡಿದರೆ ಏನು ಕಳೆದುಕೊಳ್ಳುತ್ತೇವೆ? ದೆಹಲಿಯ ರಸ್ತೆಗಳಲ್ಲಿ ನೀವು ಕಬ್ಬಿಣದ ಸರಳುಗಳನ್ನು ಹಾಕಿದ್ದೀರಿ ‘

- Advertisement -

ಫಾರೂಕ್ ಅಬ್ದುಲ್ಲಾ

ನೀವು ದೇವಸ್ಥಾನಕ್ಕೆ ಹೋಗುತ್ತೀರಿ, ನಾನು ಚರ್ಚ್‌ಗೆ ಹೋಗುತ್ತೇನೆ. ಕೆಲವರು ಗುರುದ್ವಾರಗಳು ಮತ್ತು ಚರ್ಚುಗಳಿಗೆ ಹೋಗುತ್ತಾರೆ. ರಕ್ತದ ಬಾಟಲಿಯನ್ನು ನೀಡುವಾಗ ಅದು ಹಿಂದೂ ಅಥವಾ ಮುಸ್ಲಿಮರಿಗೆ ಸೇರಿದ್ದೋ? ಎಂದು ವೈದ್ಯರು ಕೇಳುವುದಿಲ್ಲ.

ರಾಮನು ವಿಶ್ವಕ್ಕೆ ಸೇರಿದವನು. ರಾಮನು ಎಲ್ಲರಿಗೂ ಸೇರಿದವನು. ಕುರ್ಆನ್ ನಮ್ಮದು ಮಾತ್ರವಲ್ಲ ಅದು ಎಲ್ಲರಿಗೂ ಸೇರಿದೆ ಎಂದು  ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವಾದ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕಲಾಗಿರುವುದಕ್ಕೆ  ಅವರು ಕೇಂದ್ರ ಸರಕಾರವನ್ನು ಬಲವಾಗಿ ಟೀಕಿಸಿದ್ದಾರೆ.



Join Whatsapp