ಹೊಸ ಕಾನೂನುಗಳು ರೈತರನ್ನು ಗುಲಾಮಗಿರಿಯತ್ತ ಕೊಂಡೊಯ್ಯಲಿದೆ : ರಾಹುಲ್ ಗಾಂಧಿ

Prasthutha|

ಹೊಸದಿಲ್ಲಿ: ಹೊಸ ಕೃಷಿ ಕಾನೂನುಗಳು ರೈತರನ್ನು ಗುಲಾಮಗಿರಿಗೆ ಕೊಂಡೊಯ್ಯುತ್ತವೆ ಎಂದು ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ವಿವಿಧ ರೈತ ಸಂಘಟನೆಗಳು ಕರೆಕೊಟ್ಟ ‘ಭಾರತ್ ಬಂದ್’ ಗೆ ಟ್ವೀಟ್  ಮೂಲಕ  ಬೆಂಬಲವನ್ನು ಸೂಚಿಸಿರುವ ರಾಹುಲ್ ಗಾಂಧಿ,  “ಜಿ.ಎಸ್. ಟಿ ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಪ್ರಸ್ತುತ ಕೃಷಿ ಕಾನೂನುಗಳು ನಮ್ಮ ರೈತರನ್ನು ಗುಲಾಮರನ್ನಾಗಿ ಮಾಡುತ್ತದೆ” ಎಂದಿದ್ದಾರೆ.

- Advertisement -

ಹೊಸ ಕೃಷಿ ಕಾನೂನುಗಳು ಅಸಂವಿಧಾನಿಕವಾಗಿದೆ. ಕೇಂದ್ರ ಸರಕಾರದ ಕರಾಳ ಮತ್ತು ಜನ ವಿರೋಧಿ ಕಾನೂನುಗಳ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮೆಟ್ಟಲೇರಲಿದ್ದೇವೆ ಎಂಬುದಾಗಿ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು.

- Advertisement -