ಲಖಿಂಪುರ ಹಿಂಸಾಚಾರ ವಿರೋಧಿಸಿ ರೈತರಿಂದ ರೈಲು ರೋಕೋ ಚಳುವಳಿ

Prasthutha|

ನವದೆಹಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಅಕ್ಟೋಬರ್ 18 ರಂದು ರೈತರಿಂದ ರೈಲು ರೋಕೋ ಮತ್ತು 26 ರಂದು ಲಕ್ನೋದಲ್ಲಿ ಮಹಾ ಪಂಚಾಯತ್ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಕಳೆದ ವಾರ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿಯ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನನ್ನು ಬಂಧಿಸಬೇಕು ಮತ್ತು ಕೇಂದ್ರ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ರೈತರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಅಕ್ಟೋಬರ್ 12 ರಂದು ದೇಶದೆಲ್ಲೆಡೆಯಿಂದ ರೈತರು ಲಖಿಂಪುರ ಖೇರಿ ತಲುಪಿ ನಗರ ವ್ಯಾಪ್ತಿಯಲ್ಲಿ ಕ್ಯಾಂಡಲ್ ಮೆರವಣಿಗೆಯನ್ನು ಕೈಗೊಳ್ಳುತ್ತೇವೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದರು.

- Advertisement -

ಮಾತ್ರವಲ್ಲ ಲಖಿಂಪುರ ಘಟನೆಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮಗಳೊಂದಿಗೆ ರಾಜ್ಯ ಪ್ರವಾಸ ನಡೆಸುವುದಾಗಿ ಯೋಗೇಂದ್ರ ಅವರು ತಿಳಿಸಿದರು. ಅದೇ ರೀತಿ ಅಕ್ಟೋಬರ್ 18 ರಂದು ರೈಲು ತಡೆ ಮತ್ತು 26 ಕ್ಕೆ ಲಕ್ನೋದಲ್ಲಿ ಬೃಹತ್ ಮಹಾ ಪಂಚಾಯತ್ ನಡೆಯಲಿದೆ ಎಂದು ಅವರು ತಿಳಿಸಿದರು.

Join Whatsapp