ರೈತ ಪ್ರತಿಭಟನೆಗೆ ಏಳು ತಿಂಗಳು : ಜೂ. 26ರಂದು ಎಲ್ಲಾ ರಾಜಭವನಗಳ ಮುಂದೆ ಧರಣಿ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ಜೂ. 26ಕ್ಕೆ ಏಳು ತಿಂಗಳು ಪೂರ್ಣಗೊಳ್ಳುವುದರಿಂದ, ಆ ದಿನ ರಾಜ್ಯಪಾಲರ ನಿವಾಸಗಳ ಮುಂದೆ ಧರಣಿ ನಡೆಸಲು ಕರೆ ನೀಡಲಾಗಿದೆ.

- Advertisement -

ಸುಮಾರು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ಈ ಪ್ತತಿಭಟನೆಗೆ ಕರೆ ನೀಡಿದೆ. ಜೂ.26ರ ಪ್ರತಿಭಟನೆ ವೇಳೆ ರೈತರು ಕಪ್ಪು ಧ್ವಜ ಪ್ರದರ್ಶಿಸಲಿದ್ದಾರೆ. ಅಲ್ಲದೆ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗೆ ಮನವಿಗಳನ್ನು ನೀಡಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ಈ ದಿನವನ್ನು “ಹೊಲ ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುವುದು ಎಂದು ವಿಷಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಎಸ್‌ ಕೆಎಂನ ರೈತ ಮುಖಂಡ ಇಂದ್ರಜೀತ್‌ ಸಿಂಗ್‌ ಹೇಳಿದ್ದಾರೆ.

- Advertisement -

“ನಾವು ಅಂದು ಎಲ್ಲಾ ರಾಜಭವನಗಳ ಮುಂದೆ ಕಪ್ಪು ಧ್ವಜ ಪ್ರದರ್ಶಿಸಲಿದ್ದೇವೆ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಗಳಾದ ಎಲ್ಲಾ ರಾಜ್ಯಗಳ ರಾಜ್ಯಪಾಲರುಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಿದ್ದೇವೆ” ಎಂದು ಸಿಂಗ್‌ ತಿಳಿಸಿದ್ದಾರೆ.

Join Whatsapp