ರೈತರ ಪ್ರತಿಭಟನೆ | ದೆಹಲಿಯ ಕೊರೆವ ಚಳಿ ತಾಳಲಾರದೆ ಪ್ರತಿಭಟನಕಾರ ಸಾವು

Prasthutha|

ನವದೆಹಲಿ : ದೆಹಲಿ-ಹರ್ಯಾಣ ಗಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಓರ್ವ ರೈತ ಇಂದು ಮುಂಜಾನೆ ಕೊರೆವ ಚಳಿ ತಾಳಲಾರದೆ ಕೊನೆಯುಸಿರೆಳೆದಿದ್ದಾರೆ.

ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮೂರು ಮಕ್ಕಳ ತಂದೆಯಾಗಿರುವ ರೈತ ಕೊರೆವ ಚಳಿಯಿಂದಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

- Advertisement -

ರೈತರ ಸಮಸ್ಯೆಯನ್ನು ಆಲಿಸದ ಪ್ರಧಾನಿ ಮೋದಿ ಸರಕಾರದ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ, ಈಗಾಗಲೇ ಓರ್ವ ಧರ್ಮಗುರು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಾದ್ಯಂತ ರೈತರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಕಳೆದ 22 ದಿನಗಳಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ ಈಗಾಗಲೇ 20 ರೈತರು ಸಾವಿಗೀಡಾಗಿದ್ದಾರೆ.    

- Advertisement -