ರೈತರ ಪ್ರತಿಭಟನೆಗೆ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ತಂದೆ, ಮಾಜಿ ಸಂಸದ ಬೀರೇಂದ್ರ ಸಿಂಗ್ ಬೆಂಬಲ | ಧರಣಿಯಲ್ಲಿ ಭಾಗಿ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ಸ್ವತಃ ಬಿಜೆಪಿ ಮುಖಂಡರೂ ಬೆಂಬಲಿಸಲು ಆರಂಭಿಸಿದ್ದಾರೆ.

- Advertisement -

ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಚೌಧರಿ ಬೀರೇಂದ್ರ ಸಿಂಗ್ ಶುಕ್ರವಾರ ಹರ್ಯಾಣದ ಝಾಜ್ಜರ್ ಜಿಲ್ಲೆಯ ಸಂಪ್ಲಾದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ರೈತರ ಪ್ರತಿಭಟನೆ ಎಲ್ಲರ ಪ್ರತಿಭಟನೆ ಎಂದು ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಸ್ವತಂತ್ರಪೂರ್ವ ಭಾರತದಲ್ಲಿ ಜಾಟ್ ಸಮುದಾಯದ ದೊಡ್ಡ ನಾಯಕರಾಗಿದ್ದ ಸರ್ ಚೋಟು ರಾಮ್ ಅವರ ಮೊಮ್ಮಗನಾಗಿರುವ ಬೀರೇಂದ್ರ ಸಿಂಗ್, ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವುದು ಹರ್ಯಾಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಸರ್ ಚೋಟು ರಾಮು ಮಂಚ್ ಸದಸ್ಯರು ಆಯೋಜಿಸಿದ್ದ ಧರಣಿಯಲ್ಲಿ ಅವರು ಪಾಲ್ಗೊಂಡಿದ್ದಾರೆ. ಬೀರೇಂದ್ರ ಸಿಂಗ್ ಅವರ ಪುತ್ರ ಬ್ರಿಜೇಂದ್ರ ಸಿಂಗ್ ಹಿಸಾರ್ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.

- Advertisement -

“ನಾನು ರೈತರೊಂದಿಗೆ ನಿಲ್ಲುತ್ತೇನೆ. ಇದು ಈಗ ಪ್ರತಿಯೊಬ್ಬರ ಪ್ರತಿಭಟನೆಯಾಗಿದೆ. ಇದು ಸಮಾಜದ ಯಾವುದೇ ವರ್ಗಕ್ಕೆ ಸೀಮಿತಗೊಂಡಿಲ್ಲ. ನಾನು ಈಗಾಗಲೇ ಕ್ಷೇತ್ರದಲ್ಲಿದ್ದೇನೆ. ನಾನು ಮುಂಚೂಣಿಗೆ ಬರದಿದ್ದರೆ, ಜನರು ನಾನು ಕೇವಲ ರಾಜಕೀಯ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಾರೆ” ಎಂದು ಬೀರೇಂದ್ರ ಸಿಂಗ್ ಹೇಳಿದ್ದಾರೆ.  

Join Whatsapp