ರೈತರ ಪ್ರತಿಭಟನೆಯನ್ನು ಮತ್ತೊಂದು ಶಾಹೀನ್ ಬಾಗ್ ಮಾಡಬೇಡಿ : ಬಿಜೆಪಿ ಸಂಸದ

Prasthutha|

ನವದೆಹಲಿ : ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತನಾಡಲು ಸರಕಾರ ಸಿದ್ಧವಿದೆ. ಆದರೆ, ರೈತರ ಪ್ರತಿಭಟನೆ ಮತ್ತೊಂದು ಶಾಹೀನ್ ಬಾಗ್ ಆಗಲು ಬಿಡಬೇಡಿ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಎಚ್ಚರಿಕೆ ನೀಡಿದೆ.

- Advertisement -

ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯದ ಮೇಲೆ ಮಾತನಾಡಿದ ಬಿಜೆಪಿ ಸಂಸದ ಭುವನೇಶ್ವರ ಕಲಿತಾ, ಸರಕಾರಕ್ಕೆ ರೈತರ ಬಗ್ಗೆ ಗೌರವವಿದೆ. ಅವರಿಗಿರುವ ಯಾವ ಸೌಲಭ್ಯಗಳನ್ನೂ ಈ ಕಾಯ್ದೆಗಳ ಮೂಲಕ ಕಿತ್ತುಕೊಂಡಿಲ್ಲ ಎಂದು ಹೇಳಿದ್ದಾರೆ.  

Join Whatsapp