ದೆಹಲಿ ರೈತರ ಕ್ರಾಂತಿಗೆ ಖ್ಯಾತ ಅಂತಾರಾಷ್ಟ್ರೀಯ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ಬೆಂಬಲ

Prasthutha|

ನವದೆಹಲಿ : ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ 71 ದಿನಗಳಿಂದ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳಿಂದ ಬೆಂಬಲ ವ್ಯಕ್ತವಾಗಲು ಆರಂಭವಾಗಿದೆ. ‘ದೇಶದ್ರೋಹ’ದ ಆರೋಪ ಹೊರುವ ಭಯದಿಂದ ಭಾರತದ ಸೆಲೆಬ್ರಿಟಿಗಳು ಈ ಕುರಿತು ಮಾತನಾಡದೆ, ಮೌನವಾಗಿರುವ ಹೊತ್ತಲ್ಲಿ, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದ ರೈತ ಹೋರಾಟದ ಕುರಿತು ಜಗತ್ತಿನ ಗಮನ ಸೆಳೆಯಲಾರಂಭಿಸಿದ್ದಾರೆ.

- Advertisement -

ಖ್ಯಾತ ಅಂತಾರಾಷ್ಟ್ರೀಯ ಹವಾಮಾನ ಬದಲಾವಣೆ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ಇದೀಗ ಭಾರತದ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. “ಭಾರತದ ರೈತರ ಹೋರಾಟದ ಜೊತೆಗೆ ನಾವು ಐಕಮತ್ಯವನ್ನು ಪ್ರದರ್ಶಿಸುತ್ತೇವೆ” ಎಂದು ಗ್ರೆಟಾ ಥಂಬರ್ಗ್ ಟ್ವೀಟ್ ಮಾಡಿದ್ದಾರೆ.

ರೈತರ ಹೋರಾಟದ ಕುರಿತ ಪ್ರತಿಷ್ಠಿತ ಸುದ್ದಿ ಸಂಸ್ಥೆ ‘ಸಿಎನ್ ಎನ್’ ವರದಿಯನ್ನು ಶೇರ್ ಮಾಡಿರುವ ಜಗದ್ವಿಖ್ಯಾತ ಪಾಪ್ ಗಾಯಕಿ ರಿಹಾನ್ನಾ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಗ್ರೆಟಾ ಕೂಡ ತಮ್ಮ ಬೆಂಬಲ ಸೂಚಿಸಿದ್ದಾರೆ.

- Advertisement -

ಕಳೆದ 71 ದಿನಗಳಿಂದ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಬಿಜೆಪಿಗರು ಅವರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವುದಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸರಕಾರವೇ ನೇರವಾಗಿ ರೈತರನ್ನು ತಡೆಯಲು ಏನೆಲ್ಲಾ ಸಾಧ್ಯವಿದೆಯೋ ಅದೆಲ್ಲವನ್ನೂ ಬಹಿರಂಗವಾಗಿಯೇ ಮಾಡುತ್ತಿದೆ.   

Join Whatsapp