ನವದೆಹಲಿ : ಬಜೆಟ್ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ ಇಂದು ತೀವ್ರಗೊಳ್ಳುವ ಆತಂಕ ಎದುರಾಗಿರುವ ಕಾರಣ ದೆಹಲಿ ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈತರು ಬ್ಯಾರಿಕೇಡ್ ಗಳನ್ನು ದಾಟಿ ಮುನ್ನುಗ್ಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿಭಟನಾ ನಿರತ ರೈತರು ಇಂದು ‘ಸಂಸತ್ ಕಡೆಗೆ ನಡಿಗೆ’ಗೆ ಕರೆ ನೀಡಿದ್ದಾರೆ. ಗಣರಾಜ್ಯೋತ್ಸವ ದಿನ ರೈತರು ಹಮ್ಮಿಕೊಂಡಿದ್ದ ಟ್ರಾಕ್ಟರ್ ರ್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತನೆನ್ನಲಾದ ನಟನೊಬ್ಬನ ಕುಮ್ಮಕ್ಕಿನಿಂದ ಹಿಂಸಾಚಾರ ನಡೆದಿತ್ತು. ಹೀಗಾಗಿ ಬಜೆಟ್ ದಿನ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
ರೈತರು ಮುನ್ನುಗ್ಗದಂತೆ ತಡೆಯಲು ರಸ್ತೆಗಳಲ್ಲಿ ಕಾಂಕ್ರೀಟ್ ಚಪ್ಪಡಿಗಳು ಮತ್ತು ಬ್ಯಾರಿಕೇಡ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇರಿಸಲಾಗಿದೆ. ಟ್ರಾಕ್ಟರ್ ಗಳನ್ನು ತಡೆಯಲೂ ಕ್ರಮ ಕೈಗೊಳ್ಳಲಾಗಿದೆ.