ರೈತ ಕ್ರಾಂತಿ ಬೆಂಬಲಿಸಿ ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ | ಸಿದ್ದರಾಮಯ್ಯ ಬೆಂಬಲ

Prasthutha|

ಬೆಂಗಳೂರು : ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ನಗರದಲ್ಲಿ ಇಂದು ರೈತ ದಲಿತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಿಂದ ಉಪವಾಸ ಸತ್ಯಾಗ್ರಹ ನಡೆದಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

- Advertisement -

ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸಂಘಟನೆಗಳು ಸಂರ್ಘರ್ಷದ ಸಂಕಲ್ಪ ದಿನವಾಗಿ ಆಚರಿಸಿವೆ. ಈ ನಿಟ್ಟಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆಯೋಜಿಸಲಾಗಿದೆ.  

ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ , ಒಂದು ರಾಜ್ಯವನ್ನು ಪ್ರತ್ಯೇಕ ಮಾಡಲು ನೋಡಬೇಡಿ. ಗಾಂಧೀಜಿಯವರ ತತ್ವಗಳು, ಅಹಿಂಸೆ ನಮ್ಮೊಂದಿಗಿದೆ ಎಂದು ತಿಳಿಸಿದರು.

- Advertisement -

ರೈತರು ಉಗ್ರಗಾಮಿಗಳು, ದೇಶದ್ರೋಹಿಗಳು ಎಂದು ಬಿಂಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ಕೀಳುಮಟ್ಟದ ರಾಜಕೀಯದಿಂದ ಹೊರಬಂದು, ಉತ್ತಮ ರಾಜಕೀಯ ಮಾಡಿ ಎಂದು ಬಿಜೆಪಿಗೆ ಅವರು ಮನವಿ ಮಾಡಿದರು.

ದೇಶದಲ್ಲಿ ನಡೆಯುವ ಚಳವಳಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ರೈತರ ತಂಟೆಗೆ ಬಂದರೆ ಹುಷಾರ್ ಎಂದು ಅವರು ಎಚ್ಚರಿಕೆ ನೀಡಿದರು.

ದೆಹಲಿ ಪ್ರತಿಭಟನೆಯನ್ನು ತಿರುಚಲಾಗಿದೆ. ವಿಧ್ವಂಸಕ ಕೃತ್ಯ ನಡೆಸಿ ಅದನ್ನು ರೈತರ ಮೇಲಿಗೆ ಹಾಕಿದೆ ಸರಕಾರ ಎಂದು ದಸಂಸ ನಾಯಕ ಮಾವಳ್ಳಿ ಶಂಕರ್ ಹೇಳಿದರು.

ಎಸ್. ಆರ್. ಹೀರೇಮಠ್ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಮಾತನಾಡಿದರು.



Join Whatsapp