ರೈತರಿಂದ ಇಂದು ಉಪವಾಸ ಸತ್ಯಾಗ್ರಹ; ಗಾಝಿಪುರ ಗಡಿಗೆ ಉತ್ತರ ಪ್ರದೇಶದಿಂದ ಹರಿದು ಬರಲಿದೆ ಜನಸಾಗರ

Prasthutha|

ನವದೆಹಲಿ : ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಿರತರಾಗಿರುವ ರೈತರು ಇಂದು ಗಾಂಧೀಜಿ ಜನ್ಮ ಪುಣ್ಯತಿಥಿಯ ಹಿನ್ನೆಲೆಯಲ್ಲಿ, ಉಪವಾಸ ಸತ್ಯಾಗ್ರಹ ಆಚರಿಸಲು ಮುಂದಾಗಿದ್ದಾರೆ. ಅಲ್ಲದೆ, ಇಂದು ಉತ್ತರ ಪ್ರದೇಶದಿಂದ ದೊಡ್ಡ ಸಂಖ್ಯೆಯ ರೈತರು ಹೋರಾಟದೊಂದಿಗೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

- Advertisement -

ದೆಹಲಿಯ ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಮುಖಂಡರು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟವನ್ನು ನಾಶ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರೈತರನ್ನು ನಾಶ ಮಾಡಲು ಆಡಳಿತಾರೂಢ ಬಿಜೆಪಿಯ ಸಂಚು ಬಟಾಬಯಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಜಗ್ ಜೀತ್ ಸಿಂಗ್ ಹೇಳಿದ್ದಾರೆ.

- Advertisement -

ಇನ್ನೊಂದೆಡೆ, ಉತ್ತರ ಪ್ರದೇಶ-ದೆಹಲಿ ಗಡಿ ಗಾಝಿಪುರದತ್ತ ಇಂದು ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಿನ್ನೆ ಮುಝಪ್ಪರ್ ನಗರದಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತ ಮಹಾಪಂಚಾಯತ್ ಗೆ ಜನ ಸೇರಿದ್ದರು. ಅವರಲ್ಲಿ ಇಂದು ಸುಮಾರು 25,000ಕ್ಕೂ ಹೆಚ್ಚು ರೈತರು ಗಾಝಿಪುರ ಗಡಿಯಲ್ಲಿ ಪ್ರತಿಭಟನೆ ಭಾಗವಹಿಸಲು ಆಗಮಿಸಲಿದ್ದಾರೆ ಎಂದು ವರದಿಗಳಾಗಿವೆ.



Join Whatsapp