ಮಾಧ್ಯಮಗಳ ಅಪಪ್ರಚಾರಕ್ಕೆ ಸೆಡ್ಡು ಹೊಡೆದ ರೈತರು; ಹರ್ಯಾಣದಿಂದ ಮತ್ತೆ ಹರಿದು ಬರುತ್ತಿದೆ ಜನ ಸಾಗರ

Prasthutha|

ನವದೆಹಲಿ : ಗಣರಾಜ್ಯೋತ್ಸವ ದಿನದ ಹಿಂಸಾತ್ಮಕ ಘಟನೆಗಳ ಬಳಿಕ ರೈತರು, ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬರ್ಥದಲ್ಲಿ ಮಾಧ್ಯಮಗಳು ಬಿಂಬಿಸ ತೊಡಗಿದುದರಿಂದ, ರಾತೋರಾತ್ರಿ ರೈತರ ದೊಡ್ಡ ಸಂಖ್ಯೆಯಲ್ಲಿ ದೆಹಲಿಯತ್ತ ಇಂದು ಧಾವಿಸಿದ್ದಾರೆ. ನಿನ್ನೆ ಸಂಜೆ ಒಂದೆಡೆ ಪೊಲೀಸರು ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸುತ್ತಿದ್ದಾರೆ ಮತ್ತು ರೈತರು ಮನೆಗೆ ಹಿಂದಿರುಗುತ್ತಿದ್ದಾರೆ ಎಂದು ಮಾಧ್ಯಮಗಳು ಬಿಂಬಿಸಿದ್ದವು.

- Advertisement -

ಈ ಬೆಳವಣಿಗೆಗಳಿಂದ ನೊಂದ ಹರ್ಯಾಣದ ರೈತರು ಇಂದು ದೆಹಲಿಯತ್ತ ಸಾಗರೋಪಾದಿಯಲ್ಲಿ ಸಾಗಿ ಬರುತ್ತಿದ್ದಾರೆ. ಸರ್ಕಾರ ರೈತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ರೈತರು ದೆಹಲಿಗೆ ತಂಡ ತಂಡವಾಗಿ ಆಗಮಿಸುತ್ತಿದ್ದು, ಗಡಿಯಲ್ಲಿರುವ ರೈತರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿದ್ದಾರೆ.

ರಾಷ್ಟ್ರಧ್ವಜ, ಏಕ್ತಾ ಮೋರ್ಚಾದ ಧ್ವಜ ಹಾಗೂ ಹಸಿರು ಧ್ವಜವನ್ನು ಹಿಡಿದ ಅಸಂಖ್ಯಾತ ರೈತರು ವಿವಿಧ ವಾಹನಗಳಲ್ಲಿ ಗಡಿಗಳತ್ತ ಆಗಮಿಸುತ್ತಿದ್ದು, ನಿನ್ನೆಯ ಘಟನೆಯ ಬಳಿಕ ಹೋರಾಟವನ್ನು ಮತ್ತಷ್ಟು ತೀವ್ರವಾಗಿ ರೂಪಿಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಮೆಯಾಗುತ್ತಿದ್ದಾರೆ.

Join Whatsapp