ಸಿಂಘು ಗಡಿಯಲ್ಲಿ ರೈತರ ಮೇಲೆ ಕಲ್ಲೆಸೆತ; ಲಾಠಿಚಾರ್ಜ್ | ಉದ್ವಿಗ್ನ ಪರಿಸ್ಥಿತಿ

Prasthutha|

ನವದೆಹಲಿ : ಕಳೆದ ಎರಡು ತಿಂಗಳುಗಳಿಂದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮೇಲೆ ಗುಂಪೊಂದು ಕಲ್ಲೆಸೆತ ಮಾಡಿದ ಘಟನೆ ವರದಿಯಾಗಿದೆ.

- Advertisement -

ಪ್ರತಿಭಟನಾ ನಿರತ ರೈತರ ಟೆಂಟ್ ಗಳನ್ನು ಕಿತ್ತೆಸೆಯಲಾಗುತ್ತಿದೆ. ರೈತರಿಗಾಗಿ ಅಳವಡಿಸಲಾಗಿದ್ದ ವಾಶಿಂಗ್ ಮೆಶಿನ್ ಗಳಿಗೂ ಹಾನಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಗೂಂಡಾಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಅಶ್ರುವಾಯು ಸಿಡಿಸಿದ್ದಾರೆ ಎಂದು ವರದಿಯಾಗಿದೆ. ಸುಮಾರು 200ರಷ್ಟು ಮಂದಿ ರೈತರ ಮೇಲೆ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಸೇರಿದಂತೆ ಅರೆಸೇನಾ ಪಡೆಗಳನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ. ಹೀಗಿದ್ದರೂ, ದುಷ್ಕರ್ಮಿಗಳು ರೈತರು ಹೋರಾಟ ಕೈಗೊಂಡಿರುವ ಪ್ರದೇಶಕ್ಕೆ ಹೇಗೆ ಪ್ರವೇಶ ಮಾಡಿದರು ಎಂಬ ಪ್ರಶ್ನೆಗಳು ಉದ್ಭವಿಸಿವೆ.  

- Advertisement -

ನಿನ್ನೆಯೂ ಸ್ಥಳೀಯರು ರೈತರನ್ನು ತೆರವುಗೊಳಿಸಲು ಪ್ರತಿಭಟನೆ ನಡೆಸಿದ್ದರು ಎಂದು ವರದಿಗಳಾಗಿದ್ದವು. ಬಳಿಕ, ಈ ಪ್ರತಿಭಟನೆ ಸಂಘಟಿಸಿದ್ದು ಬಲಪಂಥೀಯ ‘ಹಿಂದೂ ಸೇನಾ’ ಎಂಬುದು ಸ್ಪಷ್ಟವಾಗಿತ್ತು.



Join Whatsapp