January 26, 2021

ರಣರಂಗವಾದ ದೆಹಲಿ | ಕೆಂಪುಕೋಟೆ ಗೋಪುರದ ಮೇಲೆಯೂ ಧ್ವಜ ಹಾರಾಟ; ಕಲ್ಲೆಸೆತ, ಲಾಠಿಚಾರ್ಜ್

ನವದೆಹಲಿ : ರೈತರ ಹೋರಾಟ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಕೆಂಪು ಕೋಟೆಯಲ್ಲಿ ಗುಂಪೊಂದು ದಾಂಧಲೆ ನಡೆಸಿದೆ. ಕೆಂಪುಕೋಟೆ ಹತ್ತಿದ ಕೆಲವು ಪ್ರತಿಭಟನಕಾರರು ಧ್ವಜಗಳನ್ನು ಹಾರಿಸಿದ್ದಾರೆ. ಈ ನಡುವೆ, ಪೊಲೀಸರು ಕೆಂಪುಕೋಟೆ ಬಳಿ ಲಾಠಿಚಾರ್ಜ್ ಮಾಡಿದ್ದಾರೆ. ಇಲ್ಲಿ ಕಲ್ಲೆಸೆತ ಕೂಡ ನಡೆದಿದೆ.8/

ಕಳೆದ 60 ದಿನಗಳಿಂದ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನೆ ಇಂದು ಹಿಂಸಾರೂಪಕ್ಕೆ ತಿರುಗಿದೆ. ಕೆಲವು ದುಷ್ಕರ್ಮಿಗಳು ಕೆಂಪುಕೋಟೆ ಹತ್ತಿ, ಕೆಂಪು ಕೋಟೆಯ ಗೋಪುರದ ಮೇಲೂ ಪ್ರತ್ಯೇಕ ಧ್ವಜ ಹಾರಿಸಿದ್ದಾರೆ. ಕೆಂಪುಕೋಟೆ ಮುಂಭಾಗದಲ್ಲಿರುವ ಧ್ವಜಸ್ತಂಭವೊಂದರಲ್ಲೂ ಪ್ರತ್ಯೇಕ ಧ್ವಜ ಹಾರಿಸಿದ್ದಾರೆ.

ಕೆಂಪುಕೋಟೆ ಮೇಲೆ ನಿಂತು ರಾಷ್ಟ್ರಧ್ವಜ ಸೇರಿದಂತೆ ಬೇರೆಬೇರೆ ಧ್ವಜಗಳನ್ನು ಪ್ರದರ್ಶಿಸಲಾಗಿದೆ. ಕೆಲವರು ಕೆಂಪುಕೋಟೆಯಿಂದಲೇ ಶಸ್ತ್ರಾಸ್ತ್ರಗಳನ್ನೂ ಪ್ರದರ್ಶಿಸಲಾಗಿದೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ