ರೈತರ ಪ್ರತಿಭಟನೆಯಲ್ಲಿ ಯಾವುದೇ ಸುಧಾರಣೆ ಇಲ್ಲ : ಸುಪ್ರೀಂ ಕೋರ್ಟ್ ಬೇಸರ

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

- Advertisement -

ಪ್ರತಿಭಟನಕಾರರು ಮತ್ತು ಸರಕಾರದ ನಡುವೆ ಮಾತುಕತೆಗೆ ಉತ್ತೇಜಿಸುವುದು ಸುಪ್ರೀಂ ಕೋರ್ಟ್ ಉದ್ದೇಶ. ಆದರೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿಲ್ಲ ಎಂದು ಸಿಜೆಐ ಎಸ್.ಎ. ಬೋಬ್ಡೆ ಹೇಳಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಲಿಸಿದ ವೇಳೆ ಸಿಜೆಐ ಎಸ್.ಎ. ಬೋಬ್ಡೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೈತ ಪ್ರತಿನಿಧಿಗಳು ಮತ್ತು ಕೇಂದ್ರ ಸರಕಾರದ ನಡುವೆ ಏಳನೇ ಸುತ್ತಿನ ಮಾತುಕತೆ ವಿಫಲವಾದ ಎರಡು ದಿನಗಳ ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ನಾವು ರೈತರೊಂದಿಗೆ ಚರ್ಚಿಸುತ್ತಿದ್ದೇವೆ. ಎರಡೂ ಕಡೆಗಳ ನಡುವೆ ಒಂದು ರೀತಿಯ ತಿಳುವಳಿಕೆಯ ಸಾಧ್ಯತೆಗಳಿವೆ” ಎಂದು ಹೇಳಿದ್ದಾರೆ.

- Advertisement -

ರೈತರು-ಕೇಂದ್ರ ಸರಕಾರದ ನಡುವೆ ಆರೋಗ್ಯಕರ ಚರ್ಚೆ ನಡೆಯುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.



Join Whatsapp