ರೈತ ಹೋರಾಟದ ಪ್ರಚೋದನಕಾರಿ ಪೋಸ್ಟ್ ಮಾಡುವ 1,178 ಖಾತೆಗಳ ರದ್ದತಿಗೆ ಟ್ವಿಟರ್ ಗೆ ಸರಕಾರದ ಸೂಚನೆ

Prasthutha|

ನವದೆಹಲಿ : ರೈತರ ಪ್ರತಿಭಟನೆ ಸಂಬಂಧಿ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯಗಳನ್ನು ಹಂಚುತ್ತಿರುವುದಾಗಿ ಆಪಾದಿಸಿ, ಸುಮಾರು 1,178 ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರ ಟ್ವಿಟರ್ ಗೆ ಸೂಚಿಸಿದೆ. ಪಾಕಿಸ್ತಾನ ಮತ್ತು ಖಲಿಸ್ತಾನಿಗಳಿಂದ ಈ ಖಾತೆಗಳು ನಿರ್ವಹಿಸಲ್ಪಡುತ್ತಿವೆ ಎಂದು ಸರಕಾರ ಪ್ರತಿಪಾದಿಸಿದೆ.

- Advertisement -

ಆದರೆ, ಟ್ವಿಟರ್ ಈ ಬಗ್ಗೆ ಇನ್ನೂ ಸಂಪೂರ್ಣ ಆದೇಶ ಪಾಲಿಸಿಲ್ಲ. ಪಾಕಿಸ್ತಾನ ಮತ್ತು ಖಲಿಸ್ತಾನಿ ಬೆಂಬಲಿಗರ ಖಾತೆಗಳೆಂದು ಭದ್ರತಾ ಸಂಸ್ಥೆಗಳು ಗುರುತಿಸಿರುವ ಟ್ವಿಟರ್ ಖಾತೆಗಳ ಪಟ್ಟಿಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಫೆ.4ರಂದು ಶೇರ್ ಮಾಡಿದೆ.

ರೈತರ ಹೋರಾಟಕ್ಕೆ ಸಂಬಂಧಿಸಿ ಈ ಖಾತೆಗಳು ಪ್ರಚೋದನಕಾರಿ ಪೋಸ್ಟ್ ಗಳನ್ನು ಹರಡುತ್ತಿವೆ ಎನ್ನಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಗಳು ಭಾರತದ ರೈತರ ಹೋರಾಟದ ಬಗ್ಗೆ ಮಾಡಿದ್ದ ಟ್ವೀಟ್ ಗಳನ್ನು ಸ್ವತಃ ಟ್ವಿಟರ್ ಜಾಗತಿಕ ಸಿಇಒ ಜಾಕ್ ಡೋರ್ಸೆ ಕೆಲವು ದಿನಗಳ ಹಿಂದೆ ‘ಲೈಕ್’ ಮಾಡಿದ್ದರು. ಹೀಗಾಗಿ ಈಗ ಸರಕಾರ ಗುರುತಿಸಿರುವ ರೈತ ಹೋರಾಟ ಬೆಂಬಲಿಸುವ ಖಾತೆಗಳ ರದ್ದತಿಗೆ ಎಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.   



Join Whatsapp