“ಅಧಿಕಾರದ ಮದ ಏರಿದೆ” | ರೈತ ಹೋರಾಟದ ಬಗ್ಗೆ ಕೇಂದ್ರದ ನಿರ್ಲಕ್ಷ್ಯಕ್ಕೆ ಆರೆಸ್ಸೆಸ್ ಮುಖಂಡನಿಂದಲೇ ಅಸಮಾಧಾನ

Prasthutha|

ನವದೆಹಲಿ : ಕಳೆದ ಎರಡು ತಿಂಗಳುಗಳಿಂದ ದೆಹಲಿ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ತೋರಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ಸ್ವತಃ ಆರೆಸ್ಸೆಸ್ ಮುಖಂಡರೇ ಅಸಮಾಧಾನ ಹೊರಹಾಕಿದ್ದಾರೆ.

- Advertisement -

ರೈತ ಪ್ರತಿಭಟನೆಗೆ ಸಂಬಂಧಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಉಲ್ಲೇಖಿಸಿ ಹಿರಿಯ ಆರೆಸ್ಸೆಸ್ ಮುಖಂಡ, ಮಧ್ಯಪ್ರದೇಶದ ಮಾಜಿ ರಾಜ್ಯಸಭಾ ಸದಸ್ಯ ರಘುನಂದನ್ ಶರ್ಮಾ ಅವರು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಶರ್ಮಾ ಅವರು ಅಸಮಾಧಾನ ಹೊರಹಾಕಿದ್ದಾರೆ.

“ನರೇಂದ್ರಜೀ… ನೀವು ಸರಕಾರದ ಭಾಗವಾಗಿದ್ದೀರಿ. ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಿಮ್ಮ ಉದ್ದೇಶ ರೈತರಿಗೆ ಸಹಾಯ ಮಾಡುವ ಉದ್ದೇಶವಾಗಿರಬಹುದು. ಆದರೆ, ಕೆಲವು ಜನರಿಗೆ ಸಹಾಯ ಬೇಡ ಎಂದಾಗ ಅಂತಹ ಒಳ್ಳೆಯ ನಿರ್ಧಾರವನ್ನು ಮಾಡುವುದರಿಂದ ಏನು ಪ್ರಯೋಜನ? ಯಾರಾದರೂ ಬೆತ್ತಲೆಯಾಗಿರಲು ಬಯಸಿದರೆ, ಅವನಿಗೆ ಬಲವಂತವಾಗಿ ಬಟ್ಟೆ ತೊಡಿಸುವುದರಿಂದ ಏನು ಪ್ರಯೋಜನ?” ಎಂದು ಶರ್ಮಾ ಪ್ರಶ್ನಿಸಿದ್ದಾರೆ.

- Advertisement -

ನಿಮ್ಮ ಶ್ರಮದ ಫಲವನ್ನು ನೀವು ಪಡೆಯುತ್ತಿದ್ದೀರಿ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಕೇವಲ ಭ್ರಮೆಯಷ್ಟೇ. ಇಂದು ಅಧಿಕಾರದ ದುರಹಂಕಾರ ನಿಮ್ಮ ತಲೆಗೆ ಹೋಗಿದೆ. ನೀವು ಜನಾದೇಶವನ್ನು ಏಕೆ ಕಳೆದುಕೊಳ್ಳುತ್ತಿದ್ದೀರಿ? ನಮಗೆ ಆಸಕ್ತಿಯಿಲ್ಲದ ಕಾಂಗ್ರೆಸ್ ನ ಎಲ್ಲಾ ಕೊಳೆಯ ನೀತಿಗಳನ್ನು ನಾವು ಅನುಮೋದಿಸಿದ್ದೇವೆ. ಒಂದು ಮಡಕೆಯಲ್ಲಿ ಹನಿ ಹನಿಯಾಗಿ ನೀರು ಸೋರಿಕೆಯಾಗುತ್ತಿದೆ ಎಂದು ನಾವು ಸುಮ್ಮನಾದರೆ, ಆ ಸೋರಿಕೆ ಇಡೀ ಮಡಕೆಯನ್ನೇ ಖಾಲಿ ಮಾಡುತ್ತದೆ ಎಂದೂ ಶರ್ಮಾ ಎಚ್ಚರಿಸಿದ್ದಾರೆ.

ಅದೇ ರೀತಿ ಜನಬೆಂಬಲ ಕೂಡ. ರಾಷ್ಟ್ರೀಯತೆಯನ್ನು ಬಲಪಡಿಸಲು ಎಲ್ಲಾ ಶಕ್ತಿ ಬಳಸಿಕೊಳ್ಳಿ. ಇಲ್ಲದಿದ್ದರೆ ನಾವು ವಿಷಾಧ ಪಡಬೇಕಾಗುತ್ತದೆ. ಸಿದ್ಧಾಂತವನ್ನು ಕಾಪಾಡುವ ಸೂಚನೆಯನ್ನು ನೀವು ಓದಿರಬಹುದು ಎಂದು ನಾನು ಭಾವಿಸಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ.

Join Whatsapp